Tejo Tungabhadra

200.00

15-16 ನೆಯ ಶತಮಾಮನದ ಲಿಸ್ಬನ್, ವಿಜಯನಗರ ಮತ್ತು ಗೋವಾ ನಗರಗಳ ಸಾಮಾಜಿಕ ಮತ್ತು ರಾಜಕೀಯ ಜೀವನವನ್ನು ಆಧರಿಸಿ ಬರೆದ ಜನಸಾಮಾನ್ಯರ ಕಾದಂಬರಿ.

ನಿಮ್ಮ ಹೊಸ ಕಾದಂಬರಿಯನ್ನು ಓದಿ ಮೂಕ ವಿಸ್ಮಿತನಾಗಿದ್ದೇನೆ. ಇಂತಹ ಶ್ರೇಷ್ಠ ಕೃತಿಯನ್ನು ಕನ್ನಡಿಗರಿಗೆ ಕೊಟ್ಟಿರುವ ನಿಮಗೆ ಹಾರ್ದಿಕ ಅಭಿನಂದನೆಗಳು.

– ಡಾ. ಸಿ ಎನ್ ರಾಮಚಂದ್ರನ್

ಒಂದು ನಿರ್ಣಾಯಕ ಐತಿಹಾಸಿಕ ಘಟ್ಟದಲ್ಲಿ ಎರಡು ಬೇರೆ ಬೇರೆ ದೇಶಗಳ ವಿದ್ಯಮಾನಗಳು ಕೂಡಿ ಹೊಸದೊಂದೇ ಇತಿಹಾಸ ನಿರ್ಮಾಣಗೊಳ್ಳುವ ರೋಚಕ ಕ್ಷಣಗಳನ್ನು ಎರಡು ನದಿಗಳ ಸಾಕ್ಷ್ಯದಲ್ಲಿ ಕಂಡರಿಸುವ ಅಪೂರ್ವ ಬರವಣಿಗೆ ಇಲ್ಲಿದೆ.

– ಟಿ ಪಿ ಅಶೋಕ

ಅದ್ಭುತ ಕಾದಂಬರಿ. ಕನ್ನಡ ಸಾಹಿತ್ಯದಲ್ಲಿ ಈ ಕಾದಂಬರಿ ಒಂದು ಮೈಲಿಗಲ್ಲಾಗುವುದರಲ್ಲಿ ಸಂಶಯವಿಲ್ಲ.

– ಡಾ. ಕೆ ಎನ್ ಗಣೇಶಯ್ಯ

ಮತ, ವಾಣಿಜ್ಯ, ರಾಜಕೀಯಗಳ ಬರ್ಬರವಾಸ್ತವದ ನಡುವೆ, ಶ್ರದ್ಧೆ, ಪ್ರೀತಿ, ಸಹಾನುಭೂತಿಗಳ ನಿರ್ಭರಭಾವದ ಬದುಕು ತೇಜೋ-ತುಂಗಭದ್ರೆಗಳ ನಡುವೆ ಹರಿದಿದೆ.

– ಶತಾವಧಾನಿ ಗಣೇಶ್

ಅಸಂಖ್ಯ ಪಾತ್ರಗಳು, ವಿಭಿನ್ನ ದೇಶಗಳು, ವೈವಿಧ್ಯಮಯ ಸಂಸ್ಕೃತಿಗಳು… ಕಾಲದ ವಿರಾಡ್ರೂಪಕ್ಕೆ ಆಕಾರ ಕೊಡಲೆತ್ನಿಸಿವೆ.

– ಡಾ. ವಿಕ್ರಮ ವಿಸಾಜಿ

Check on Google Playstore

Category:

ABOUT THE AUTHOR

ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ 1969ರಲ್ಲಿ ಜನಿಸಿದ ವಸುಧೇಂದ್ರ ಅಲ್ಲಿಯೇ ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮಾಡಿದ್ದಾರೆ. NITK ಸುರತ್ಕಲ್‍ನಿಂದ ಇಂಜಿನಿಯರಿಂಗ್ ಮತ್ತು IISc ಬೆಂಗಳೂರಿನಿಂದ ಎಂ.ಇ. ಪದವಿ ಪಡೆದಿದ್ದಾರೆ. 20 ವರ್ಷಗಳ ಕಾಲ ಸಾಫ್ಟ್‌ವೇರ್ ಪ್ರಪಂಚದಲ್ಲಿ ಕೆಲಸ ಮಾಡಿ, ಈಗ ತಮ್ಮ ಸಮಯವನ್ನು ಪ್ರವಾಸ, ಓದು ಮತ್ತು ಬರಹಗಳಿಗೆ ಬಳಸುತ್ತಾರೆ.

ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ, ದ.ರಾ. ಬೇಂದ್ರೆ ಕಥಾ ಪ್ರಶಸ್ತಿ, ಮಾಸ್ತಿ ಕಥಾ ಪುರಸ್ಕಾರ, ಡಾ. ಯು. ಆರ್. ಅನಂತಮೂರ್ತಿ ಪ್ರಶಸ್ತಿ, ಬೆಸಗರಹಳ್ಳಿ ರಾಮಣ್ಣ ಪ್ರಶಸ್ತಿ, ವಸುದೇವ ಭೂಪಾಲಂ ದತ್ತಿನಿಧಿ ಪ್ರಶಸ್ತಿ, ವರ್ಧಮಾನ ಉದಯೋನ್ಮುಖ ಪ್ರಶಸ್ತಿ, ಸೇಡಂನ ‘ಅಮ್ಮ’ ಪ್ರಶಸ್ತಿ ಮತ್ತು ಕಥಾರಂಗಂ ಪ್ರಶಸ್ತಿಗಳನ್ನು ಪಡೆದಿದ್ದಾರೆ. ‘ಛಂದ ಪುಸ್ತಕ’ ಎಂಬ ಪ್ರಕಾಶನ ಸಂಸ್ಥೆಯನ್ನು ಪ್ರಾರಂಭಿಸಿ, ಅದರ ಮೂಲಕ ನಾಡಿನ ಹಲವು ಹೊಸ ಬರಹಗಾರರ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಆ ಪುಸ್ತಕಗಳ ಜೊತೆಗೆ, ತಮ್ಮ ಪುಸ್ತಕಗಳ ಮುದ್ರಣ ಮತ್ತು ಮಾರಾಟವನ್ನು ಸ್ವತಃ ನೋಡಿಕೊಳ್ಳುತ್ತಾರೆ.

ಚಾರಣದಲ್ಲಿ ವಿಶೇಷ ಆಸಕ್ತಿಯಿರುವ ಇವರು ನಮ್ಮ ಪಶ್ಚಿಮ ಘಟ್ಟದ ಕಾಡಿನಲ್ಲಿರುವ ಹಲವು ಬೆಟ್ಟಗಳನ್ನೂ, ತಾಂಜಾನಿಯಾ ದೇಶದಲ್ಲಿರುವ ಕಿಲಿಮಂಜಾರೋ ಪರ್ವತವನ್ನೂ ಮತ್ತು ಹಿಮಾಲಯದಲ್ಲಿರುವ ಹಲವಾರು ಪರ್ವತಗಳನ್ನೂ ಹತ್ತಿದ್ದಾರೆ. ಟಿಬೇಟಿನಲ್ಲಿರುವ ಕೈಲಾಶ ಮತ್ತು ಮಾನಸ ಸರೋವರದ ಚಾರಣವನ್ನು ಮಾಡಿದ್ದಾರೆ. ಸ್ಕ್ವಾಷ್ ಆಟ, ಮಹಾಭಾರತದ ಅಧ್ಯಯನ ಮತ್ತು ಶಾಸ್ತ್ರೀಯ ಸಂಗೀತವನ್ನು ಕೇಳುವುದು ಇವರ ಇತರ ಹವ್ಯಾಸಗಳು.

vas123u@rocketmail.com

Tejo Tungabhadra
Scroll to top