Shaalabhanjike

60.00

ಖ್ಯಾತ ಪತ್ರಕರ್ತ ಹಾಗೂ ಸಾಹಿತಿ ನಾಗೇಶ ಹೆಗಡೆಯವರು ಈ ಕೃತಿಯ ಬಗ್ಗೆ ಹೀಗೆ ಹೇಳಿದ್ದಾರೆ:

ವಿಜ್ಞಾನಿಯೊಬ್ಬ ತನ್ನ ಸಂಶೋಧನಾ ಕ್ಷೇತ್ರದ ಮಾಹಿತಿಗಳನ್ನೇ ಥ್ರಿಲ್ ಕೊಡುವ ಕಥಾರೂಪದಲ್ಲಿ ಹೆಣೆಯುವುದು ಅಷ್ಟೇನೂ ಸವಾಲಿನ ಕೆಲಸವಾಗಿರಲಾರದು (ಕನ್ನಡದ ಮಟ್ಟಿಗೆ ಅದೂ ಇಲ್ಲ ಬಿಡಿ). ಇಲ್ಲಿ ಹಾಗಲ್ಲ. ಇತಿಹಾಸದ ಗರ್ಭದಲ್ಲಿ ಅಡಗಿದ ಸಂಗತಿಗಳನ್ನು ಸಾಧಾರ ಹೊರಕ್ಕೆಳೆದು, ವರ್ತಮಾನದೊಂದಿಗೆ ಬೆರೆಸಿ ಕಲಾತ್ಮಕವಾಗಿ ಹೆಣೆಯಲಾಗಿದೆ. ಇದು ಅಪರೂಪದ ಸಾಧನೆಯೇ ಸರಿ.

ಅಲ್ಲಲ್ಲಿ ಕಡೆದಿಟ್ಟ ಕಲ್ಲುಗಳ ಅವಶೇಷಗಳಲ್ಲಿ ನಮ್ಮ ರೋಚಕ ಚರಿತ್ರೆಗಳು ಹೂತು ಹೋಗಿವೆ. ಇಲ್ಲವೆ ನೀರಸ ಪಠ್ಯಗಳಾಗಿ ಶಿಕ್ಷಕರ ನೋಟ್‍ಬುಕ್‍ಗಳಿಂದ ವಿದ್ಯಾರ್ಥಿಗಳ ನೋಟ್‍ಬುಕ್‍ಗಳಿಗೆ ದಾಟಿ ಯಾರನ್ನೂ ತಟ್ಟದೇ ಸಾಗುತ್ತಿವೆ. ಚರಿತ್ರೆಯ ಬಗೆಗಿನ ಅಂಥ ಅಸಡ್ಡೆಯನ್ನು ನಿವಾರಿಸಿ ಹೊಸ ಸಂಶೋಧನೆಗೆ ಹೊಸ ಪೀಳಿಗೆಯಲ್ಲಿ ಆಸಕ್ತಿ ಮೂಡಿಸಲು ಇಲ್ಲವೇ ಕಡೇಪಕ್ಷ ಅಳಿದುಳಿದ ಶಿಲಾಸಾಕ್ಷಿಗಳತ್ತ ತುಸು ಗೌರವದಿಂದ ನೋಡುವಂತಾಗಲು ಇಂದು ಇಂಥ ಥ್ರಿಲ್ಲರ್‍ಗಳ ಅಗತ್ಯ ತುಂಬ ಇದೆ.

Check on Google Playstore

Category:

ABOUT THE AUTHOR

ಡಾ. ಕೆ ಎನ್ ಗಣೇಶಯ್ಯ ವೃತ್ತಿಯಿಂದ ಕೃಷಿ ವಿಜ್ಞಾನಿ. ಕೋಲಾರ ಜಿಲ್ಲೆಯವರು. ೩೦ ವರ್ಷಗಳಿಂದ ತಳಿ ಅಭಿವೃದ್ದಿಯಲ್ಲಿ ತೊಡಗಿದವರು. ಪ್ರಾಣಿ ಮತ್ತು ಸಸ್ಯಗಳ ವರ್ತನೆಗೆ ಮೂಲಭೂತವಾದ ಜೀವವಿಕಾಸದ ತತ್ವಗಳನ್ನು ಅನ್ವೇಷಿಸುವುದು ಇವರ ಮತ್ತೊಂದು ಸಂಶೋಧನಾಸಕ್ತಿ. ಭಾರತದ ಪ್ರಮುಖ ಜೀವವೈವಿಧ್ಯ ತಾಣಗಳಲ್ಲಿನ ಸಸ್ಯಗಳ ಮತ್ತು ದೇಶದ ಜೀವ ಸಂಪತ್ತಿನ ಬಗ್ಗೆ ಇವರು ತಯಾರಿಸಿರುವ ಮಾಹಿತಿ ಖಜಾನೆಯ ಸಿ.ಡಿ.ಗಳು ಮತ್ತು ಅಂತರ್ಜಾಲ ಒಂದು ಅಪೂರ್ವ ಹೆಜ್ಜೆ. ಇನ್ನೂರಕ್ಕೂ ಹೆಚ್ಚು ವೈಜ್ಞಾನಿಕ ಪ್ರಬಂಧಗಳು ಮತ್ತು ಆರು ವೈಜ್ಞಾನಿಕ ಪುಸ್ತಕಗಳ ಪ್ರಕಟಣೆ.

ಶಾಲಭಂಜಿಕೆ ಸಣ್ಣಕತೆಗಳ ಸಂಕಲನ ಇವರ ಮೊದಲ ಸೃಜನಶೀಲ ಬರವಣಿಗೆ. ವಿವಿಧ ಪತ್ರಿಕೆಗಳಲ್ಲಿ ಹಲವಾರು ಕತೆಗಳು ಪ್ರಕಟವಾಗಿವೆ. ಕನಕ ಮುಸುಕು, ಕರಿಸಿರಿಯಾನ, ಕಪಿಲಿಪಿಸಾರ, ಚಿತಾದಂತ, ಏಳು ರೊಟ್ಟಿಗಳು, ಮೂಕಧಾತು ಮತ್ತು ಶಿಲಾಕುಲವಲಸೆ ಇವು ಇವರ ಕಾದಂಬರಿಗಳು. ಶಾಲಭಂಜಿಕೆ, ಪದ್ಮಪಾಣಿ, ನೇಹಲ, ಸಿಗೀರಿಯಾ, ಕಲ್ದವಸಿ ಮತ್ತು ಮಿಹಿರಾಕುಲ ಇವು ಇವರ ಕಥಾಸಂಕಲನಗಳು. ಭಿನ್ನೋಟ ಎನ್ನುವುದು ಇವರ ಲೇಖನಗಳ ಸಂಕಲನ.

ಕರ್ನಾಟಕ ಸರ್ಕಾರದ ಪರಿಸರ ಪ್ರಶಸ್ತಿ ಮತ್ತು ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ಜೊತೆಗೆ ಹಲವಾರು ಪ್ರಶಸ್ತಿಗಳಿಗೆ ಭಾಜನರು.

knganeshaiah@gmail.com

Shaalabhanjike

Reviews

There are no reviews yet.

Be the first to review “Shaalabhanjike”

Your email address will not be published. Required fields are marked *

Scroll to top