ABOUT THE AUTHOR
ಪೂರ್ಣಪ್ರಜ್ಞನ ಊರು ಕಾರ್ಕಳ. ೨೦೦೧ನೇ ಇಸವಿಯಲ್ಲಿ, ತನ್ನ ಹತ್ತನೇ ವಯಸ್ಸಿನಲ್ಲೇ ನಮ್ಮನ್ನು ಬಿಟ್ಟು ಹೋದ ಅವನು ತನ್ನ ನೋಟ್‌ಬುಕ್ಕಿನಲ್ಲಿ ಕೆಲವು ಚೆಂದದ ಕಿರುಗವನಗಳನ್ನು ಬರೆದಿಟ್ಟಿದ್ದ. ಶಾಲೆಯಲ್ಲಿ ಫೇಲಾಗುತ್ತಿದ್ದ ವಿದ್ಯಾರ್ಥಿಗಳಿಗೆ ಟೀಚರ್ ಇಲ್ಲದಾಗ ಅಕ್ಷರಗಳ ಸಚಿತ್ರ ಚಾರ್ಟ್ ಮಾಡಿ, ತನ್ನ ಒಂದು ಗುಂಪು ಮಾಡಿಕೊಂಡು ಕಲಿಸುತ್ತಿದ್ದ. ಟೀಚರುಗಳು, ದಿನಸಿ ಅಂಗಡಿಯವರು, ಟೇಲರು, ಆಟೊರಿಕ್ಷಾದವರು, ಹೂ ಮಾರುವವರು ಎಲ್ಲರಿಗೂ ಫ್ರೆಂಡಾಗಿದ್ದ ಪೂರ್ಣಪ್ರಜ್ಞ, ಲೇಖಕಿ ಜ್ಯೋತಿ ಹಾಗೂ ಗುರುಪ್ರಸಾದ್‌ರ ಮಗ ಮತ್ತು ಗೌತಮನ ತಮ್ಮ.
Reviews
There are no reviews yet.