ABOUT THE AUTHOR
ಸಂಯುಕ್ತಾ ಪುಲಿಗಲ್ ಬೆಂಗಳೂರಿನ ನಿವಾಸಿ. ಪ್ರಾಥಮಿಕ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿ ಪೂರೈಸಿ, ಪತ್ರಿಕೋದ್ಯಮ, ಮನಃಶಾಸ್ತ್ರ, ಇಂಗ್ಲಿಷ್ ವಿಷಯಗಳಲ್ಲಿ ಪದವಿಯನ್ನು ಪಡೆದು, ಬೆಂಗಳೂರು ವಿವಿಯಲ್ಲಿ ಇಂಗ್ಲಿಷ್ ಹಾಗೂ ಕರ್ನಾಟಕ ಮುಕ್ತ ವಿವಿಯಲ್ಲಿ (KSOU) ಕನ್ನಡ ಸ್ನಾತಕೋತ್ತರ ಪದವಿಯನ್ನು ಗಳಿಸಿ ಪ್ರಸ್ತುತ ಐಟಿ ಉದ್ಯೋಗಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವೀಣಾವಾದನದಲ್ಲಿ ಆಸಕ್ತಿ. ಓದು ಮತ್ತು ಬರಹ ಇವರ ಹವ್ಯಾಸ. ದೈನಂದಿನ, ಮಾಸಿಕ ಹಾಗೂ ಅಂತರ್ಜಾಲ ಪತ್ರಿಕೆಗಳಲ್ಲಿ ಅಂಕಣಗಳು ಹಾಗೂ ಲೇಖನಗಳನ್ನು ಪ್ರಕಟಿಸಿದ್ದಾರೆ. ‘ಪರ್ವತದಲ್ಲಿ ಪವಾಡ’ ಇವರ ಮೊದಲ ಅನುವಾದಿತ ಪುಸ್ತಕ.
samyu59@gmail.com
ನ್ಯಾಂಡೊ ಪರಾಡೊರವರು, 1972ರ ವಿಮಾನಾಪಘಾತದ ಸಮಯದ ಯುವ ಪರಾಕ್ರಮಿ ಎಂದು ಜಗತ್ತಿನಾದ್ಯಂತ ಹೆಸರುಗಳಿಸಿದ್ದಾರೆ. ಈ ಬಗ್ಗೆ ಸಂಕೋಚವನ್ನೇ ವ್ಯಕ್ತಪಡಿಸುವ ಅವರು ಇಂದು ಉರಗ್ವೇಯ ಹಲವಾರು ಉದ್ಯಮಗಳ ಮುಖ್ಯಸ್ಥರಾಗಿದ್ದಾರೆ. ತನ್ನ ತಂದೆಯ ಹಾಡ್ರ್ವೇರ್ ವ್ಯವಹಾರವನ್ನು ಒಳಗೊಂಡಂತೆ, ಜಾಹೀರಾತು-ವ್ಯಾಪಾರೋದ್ಯಮ, ದೂರದರ್ಶನ ಮಾಧ್ಯಮದಲ್ಲಿ ಇವರು ಪ್ರವಾಸ, ಫ್ಯಾಶನ್, ಪ್ರಸ್ತುತ ಘಟನೆಗಳು ಮತ್ತು ಮೋಟಾರು ಸ್ಪರ್ಧೆಗಳು ಮುಂತಾದ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಾರೆ. 1991ರ ನಂತರ ಇವರು ಅಂತರ್ರಾಷ್ಟ್ರೀಯ ಮಟ್ಟದ ಅತ್ಯುತ್ತಮ ಭಾಷಣಕಾರರೆಂದು ಕರೆಸಿಕೊಂಡಿರುತ್ತಾರೆ ಮತ್ತು ಅನೇಕ ಸ್ಫೂರ್ತಿದಾಯಕ ಉಪನ್ಯಾಸಗಳನ್ನು ಮಾಡಿರುತ್ತಾರೆ. ಇವರು ಎಫ಼್ ಒನ್ ಫಾರ್ಮುಲಾ ಕಾರ್ ಸ್ಪರ್ಧಿಯಾಗಿದ್ದು, ‘ಟೂರಿಂಗ್ ಕಾರ್ ರೇಸಿಂಗ್’ನಲ್ಲಿ ಯೂರೋಪಿನ ಟೀಮ್ ಕಪ್ ಗೆದ್ದಿರುತ್ತಾರೆ. ಈಗಲೂ ಅವರು ಕಾರು, ಮೋಟಾರು ಸೈಕಲ್ಲು ಮತ್ತು ಸ್ಪೀಡ್ ಬೋಟುಗಳನ್ನು ಇಷ್ಟಪಡುತ್ತಾರೆ. ಉರಗ್ವೇಯ ಮಾಂಟೆವಿಡಿಯೋದಲ್ಲಿ ಪತ್ನಿ ವೆರೋನಿಕ್ ಮತ್ತು ಮಕ್ಕಳಾದ ವೆರೋನಿಕಾ ಮತ್ತು ಸಿಸಿಲಿಯಾರೊಡನೆ ವಾಸ. ನ್ಯಾಂಡೋ ಪರಾಡೊರನ್ನು ಈ ಮಿಂಚಂಚೆಯ ಮೂಲಕ ತಲುಪಬಹುದು:
nando1@parrado.com
ವಿನ್ಸ್ ರಾಸ್ ಅವರು ಈ ಪುಸ್ತಕದ ಮತ್ತೊಬ್ಬ ಲೇಖಕರು. ನ್ಯಾಂಡೊರಿಗೆ ಈ ಪುಸ್ತಕ ರಚಿಸಲು ರಾಸ್ ಸಹಾಯಕರಾಗಿದ್ದಾರೆ. ಇವರು ಪ್ರಮುಖ ಲೇಖಕರಾಗಿದ್ದಾರೆ. ಇವರ ಕಥೆಗಳು ನ್ಯೂ ಯಾರ್ಕ್ ಟೈಮ್ಸ್ , ಲಾಸ್ ಏಂಜಲ್ಸ್ ಟೈಮ್ಸ್ , ರೀಡರ್ಸ್ ಡೈಜೆಸ್ಟ್, ಸ್ಪೋರ್ಟ್ಸ್ ಇಲ್ಲಸ್ಟ್ರೇಟೆಡ್, ಮತ್ತಿತರ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ‘ವೈ ಗಾಡ್ ವೋಂಟ್ ಗೋ ಅವೇ: ಬ್ರೈನ್ ಸೈನ್ಸ್ ಅಂಡ್ ಬೈಯಾಲಜಿ ಆಫ಼್ ಬಿಲೀಫ಼್’ ಎಂಬುದು ಇವರ ಈ ಹಿಂದಿನ ಪುಸ್ತಕವಾಗಿದೆ. ಇವರು ಪ್ರಸ್ತುತ ಪಿಟ್ಸ್‍ಬರ್ಗ್‍ನಲ್ಲಿ ತಮ್ಮ ಪತ್ನಿ ಕ್ರಿಸ್ಟೀನ್ ಮತ್ತು ಮಗಳು ಕಾರ್ಮೆಲಾ ಜೊತೆಗಿದ್ದಾರೆ.
Reviews
There are no reviews yet.