ABOUT THE AUTHOR
ಬಾಗಲಕೋಟ ಜಿಲ್ಲೆಯ ಸಿರೂರು ಸ್ವಂತ ಊರು. 1973ರಲ್ಲಿ ಜನನ. ಸ್ವಗ್ರಾಮದಲ್ಲಿಯೇ ಹೈಸ್ಕೂಲ್ವರೆಗೆ ಶಿಕ್ಷಣ. ನಂತರ ಅಮೀನಗಡ, ಬಾಗಲಕೋಟ, ಇಲಕಲ್ಲಗಳಲ್ಲಿ ಚಿತ್ರಕಲೆಯ ಡಿಪ್ಲೋಮ ಪದವಿ ಮತ್ತು ಸ್ನಾತಕೋತ್ತರ ಪದವಿಗಳ ಅಧ್ಯಯನ. 2008ರಿಂದ ರಾಯಚೂರು ಜಿಲ್ಲೆಯ ಕುರುಕುಂದ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ಚಿತ್ರಕಲಾ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. `ಭವ’, `ಬೇರು ಮತ್ತು ಬೆವರು’ ಕಥಾ ಸಂಕಲನಗಳು, `ಮನುಷ್ಯರು ಬೇಕಾಗಿದ್ದಾರೆ’ ಕವನ ಸಂಕಲನ, `ರೂಪ-ನಿರೂಪ’ ಪೇಂಟಿಂಗ್ಸ್ಗಳ ಕುರಿತದ್ದು ಮತ್ತು ಸಂಪಾದಿತ ಕೃತಿ `ಬಿಸಿಲ ಸೀಮೆಯ ಜಾನಪದ ಸಿರಿ’ ಇವಿಷ್ಟು ಈ ತನಕ ಪ್ರಕಟವಾಗಿವೆ. ಈ ಕೃತಿಗಳಿಗೆ ಕಸಾಪ ದತ್ತಿನಿಧಿ ಬಹುಮಾನ, ಬೇಂದ್ರೆ ಗ್ರಂಥ ಬಹುಮಾನ; ಕಥೆಯೊಂದಕ್ಕೆ ಗುಲಬರ್ಗಾ ವಿಶ್ವವಿದ್ಯಾಲಯದ ಚಿನ್ನದ ಪದಕ ಲಭಿಸಿದೆ. 2018ರಲ್ಲಿ ಬಾಗಲಕೋಟ ಜಿಲ್ಲಾ ಕಸಾಪ `ಕ್ರಿಯಾಶೀಲ ಲೇಖಕ’ ಪ್ರಶಸ್ತಿ ನೀಡಿದೆ.
laxmanbadami123@gmail.com
Reviews
There are no reviews yet.