Nava JeevagaLu

150.00

ಖ್ಯಾತ ಇತಿಹಾಸ ತಜ್ಞ ವಿಲಿಯಂ ಡಾಲ್ರಿಂಪಲ್ ಕೃತಿಯನ್ನು ನವೀನ್ ಗಂಗೋತ್ರಿ ಕನ್ನಡಕ್ಕೆ ಅನುವಾದಿಸಿದ್ದಾರೆ. ಈ ಕೃತಿಯ ಕುರಿ ನ್ಯೂಜೆರ್ಸಿಯ ಕನ್ನಡತಿ ಮೀರಾ ಪಿ ಆರ್ ಹೀಗೆ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ:

ಶ್ರದ್ಧೆಯ ಆಳವನ್ನು, ಅದಕ್ಕೂ ಮಿಗಿಲಾದ ಮನುಷ್ಯ ಜೀವನದ ವೈಪರೀತ್ಯ, ವೈಚಿತ್ರÀ್ಯಗಳನ್ನು ಅರ್ಥ ಮಾಡಿಕೊಳ್ಳುವುದಾದರೂ ಹೇಗೆ? ಹಲವು ವಿಭಿನ್ನ ಧರ್ಮ-ಮತ-ಜಾತಿ-ಪಂಗಡಗಳಲ್ಲಿ ಬದುಕುತ್ತಿರುವ ಇಂದಿನ ಆಧುನಿಕ ಭಾರತದ ಜನಜೀವನದಲ್ಲಿ ನೂರಾರು, ಸಾವಿರಾರು ವರ್ಷಗಳ ಪರಂಪರೆಯಿರುವ ಶ್ರದ್ಧೆ, ದರ್ಶನ, ನಂಬಿಕೆಗಳ ಹಾದಿಗಳಿವೆ. ಬಹುರೂಪಿ ದೇವತೆಗಳ ಆರಾಧನೆಯಲ್ಲೇ ಏಕದೈವೋಪಾಸನೆಯನ್ನು ಒಪ್ಪಿಕೊಂಡ ಹಾಗೆಯೇ ದೈವದ ಕಲ್ಪನೆಯನ್ನೇ ಧಿಕ್ಕರಿಸಿ, ಬದುಕು ಎಲ್ಲಕ್ಕಿಂತ ದೊಡ್ಡದೆನಿಸಿಕೊಳ್ಳುವ ದರ್ಶನಕ್ಕೂ ಇಲ್ಲಿ ಜಾಗವಿದೆ. ಹಾಗೆಂದು ಹೆಮ್ಮೆಪಡುವ ಕ್ಷಣಗಳಲ್ಲೇ ಶ್ರದ್ಧೆಯ ಹೆಸರಿನಲ್ಲೆ ನಡೆವ ಮೌಢ್ಯದ, ಹಿಂಸೆಯ ಭಯಂಕರ ವಾಸ್ತವ ಚಿತ್ರಣಗಳು ಇಲ್ಲಿವೆ. ಈ ಹಿಂಸೆಯಲ್ಲಿ ಸಿಕ್ಕಿ ನರಳುವ ಅಮಾಯಕ ಜೀವಗಳಿಗೆ ಮತ್ತೆ ಆಸರೆಯಾಗುವ ಅಲ್ಲಲ್ಲಿನ ಪ್ರತಿಸಂಸ್ಕೃತಿಗಳೂ, ದರ್ಶನಗಳೂ ಕಾಲಾಂತರದಲ್ಲಿ ನಂಬಿಕೆಯ ಇನ್ನೊಂದು ಹಾದಿಯಾಗಿ ಅರಳುವ ಅಥವಾ ರೂಪಾಂತರವಾಗುವ ಚೋದ್ಯವಿದೆ. ಇಲ್ಲಿ ಯಾವುದೂ ಮೇಲ್ನೋಟಕ್ಕೆ ಕಾಣುವಷ್ಟು ಸರಳವೂ ಅಲ್ಲ, ಅಮಾಯಕವೂ ಅಲ್ಲ. ಈ ಎಲ್ಲ ಹಾದಿಗಳೂ ಆಯಾಯ ಬದುಕಿನ ಆ ಹೊತ್ತಿನ ಅನುಕೂಲಕ್ಕೆ ತೆರೆದುಕೊಂಡ ದಾರಿಗಳಷ್ಟೇ ಅಂದುಕೊಳ್ಳುವುದೂ ಸುಳ್ಳಾಗುತ್ತದೆ.

ಇಂದಿನ `ಸ್ಪಿರಿಚ್ಯುಯಲ್ ಇಂಡಿಯಾದ ಅಪರೂಪದ ಚಿತ್ರಣ’ ಎಂದೇ ಬಹು ಜನಗಳಿಂದ ಹೊಗಳಿಸಿಕೊಂಡಿರುವ ಈ ಪುಸ್ತಕವನ್ನು ಹಾಗೆಲ್ಲ ಅಂದುಕೊಳ್ಳದೆ ಓದಿದಾಗ ಮಾತ್ರ ಇನ್ನೂ ಹೆಚ್ಚು ಆಪ್ತವಾಗಬಲ್ಲದು. ಯಾಕೆಂದರೆ ಭಾರತೀಯ ಸಂಸ್ಕೃತಿಯ ಅರಿವು ಅಷ್ಟಾಗಿ ಇಲ್ಲದ ಓದುಗರಿಗಾಗಿಯೇ ಎಂಬ ಹಾಗೆ ಲೇಖಕ ಅಲ್ಲಲ್ಲಿ ಅತಿ ವಿಷದವಾಗಿಯೇ ಒದಗಿಸಿರುವ ಆಯಾಯ ಧರ್ಮಶ್ರದ್ಧೆಯ ಕುರಿತ ಪರಿಚಯಾತ್ಮಕ ವಿವರಣೆಗಳಿಗಿಂತ ಆ ಶ್ರದ್ಧೆಯ ಹಾದಿಯಲ್ಲಿ ಸಾಗುತ್ತಿರುವ ಜೀವಗಳ ಜೊತೆಗಿನ ಮಾತುಕತೆಯೇ ಆಧ್ಯಾತ್ಮಿಕ ಅನುಭೂತಿಗೂ ಮೀರಿದ ಜೀವನಪ್ರೀತಿಯ ಅಥವಾ ಈ ನಶ್ವರ ಬದುಕಿನ ಕ್ಷಣಭಂಗುರತೆಯ ಒಂದು ಸಣ್ಣ ಮಿಂಚನ್ನು ಅಲ್ಲಲ್ಲಿ ಆಯಾಚಿತವಾಗಿ ಕಟ್ಟಿಕೊಟ್ಟುಬಿಡುತ್ತದೆ. ಹೀಗಾಗಿಯೆ ಈ ಒಂಭತ್ತು ಜೀವಗಳ ಕಥೆಗಳನ್ನು ಹೇಳುವಾಗ ಲೇಖಕ ಕಥೆಗಾರ, ಕವಿ, ಇತಿಹಾಸಕಾರ, ರಾಜಕೀಯ ವಿಶ್ಲೇಷಣಾಕಾರ…. ಹೀಗೆಲ್ಲ ಬಹುರೂಪಗಳನ್ನು ಅಲ್ಲಲ್ಲಿ ಧರಿಸುತ್ತಲೇ ಉಳಿಯುತ್ತಾನೆ.

ನಮಗೆ ಪರಿಚಯವಿದ್ದೂ ಅಪರಿಚಿತವಾಗೇ ಉಳಿದಿರುವ ನಮ್ಮದೇ ಸಂಸ್ಕೃತಿಯ, ನಮ್ಮದೇ ಪರಂಪರೆಯ, ನಮ್ಮದೇ ಜನರ ಈ ಕಥೆಗಳನ್ನು ಈಗ ಕನ್ನಡದಲ್ಲೇ ಓದುವಂತೆ ಸೊಗಸಾಗಿ ಅನುವಾದಿಸಿ ಕೊಟ್ಟಿದ್ದಾರೆ, ಕನ್ನಡದ ಯುವ ಬರಹಗಾರ ನವೀನ ಗಂಗೋತ್ರಿ.

ಮೀರಾ ಪಿ ಆರ್, ನ್ಯೂಜೆರ್ಸಿ

Check on Google Playstore

Category:

ABOUT THE AUTHOR

ಸ್ಕಾಟ್‌ಲ್ಯಾಂಡಿನ ಇವರು, ಫಿರ್ತ್ ನದಿಯ ದಡದಲ್ಲಿ ಬಾಲ್ಯವನ್ನು ಕಳೆದಿದ್ದಾರೆ. ತಮ್ಮ ಬಹುಜನಪ್ರಿಯ ಕೃತಿ ‘ಇನ್ ಕ್ಸನಾಡು’ ವನ್ನು ತಮ್ಮ ೨೨ನೇ ವಯಸ್ಸಿನಲ್ಲಿಯೇ ಬರೆದರು. ‘ಸಿಟಿ ಆಫ್ ಜಿನ್ಸ್’, ‘ದಿ ಏಜ್ ಆಫ್ ಕಾಲಿ’, ‘ದಿ ಲಾಸ್ಟ್ ಮೊಗಲ್’ ಇತ್ಯಾದಿ ಬಹುಮನ್ನಣೆ ಗಳಿಸಿದ ಇವರ ಕೃತಿಗಳು, ಸಾಕಷ್ಟು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಗಳಿಸಿವೆ. ಪತ್ನಿ ಮತ್ತು ಮೂವರು ಮಕ್ಕಳ ಜೊತೆಯಲ್ಲಿ ದೆಹಲಿಯ ಹೊರವಲಯದ ತಮ್ಮ ತೋಟದ ಮನೆಯಲ್ಲಿ ಇವರು ವಾಸಿಸುತ್ತಾರೆ.

ಉತ್ತರ ಕನ್ನಡ ಜಿಲ್ಲೆಯ ಶೇವ್ಕಾರಿನವರು. ಅಲ್ಲಿಯೇ ಬಾಲ್ಯ ಮತ್ತು ಪ್ರಾಥಮಿಕ ವಿದ್ಯಾಭ್ಯಾಸ. ಸಂಸ್ಕೃತ ವ್ಯಾಕರಣದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದಿದ್ದು ಶೃಂಗೇರಿಯ ರಾಷ್ಟ್ರಿಯ ಸಂಸ್ಕೃತ ಸಂಸ್ಥಾನದಲ್ಲಿ. ವಿದ್ಯಾವಾರಿಧಿ ಪದವಿಗಾಗಿ (ಪಿಹೆಚ್‌ಡಿ) ಅದೇ ವಿಶ್ವವಿದ್ಯಾಲಯದ ಬಾಹ್ಯ ವಿದ್ಯಾರ್ಥಿ. ಕೊಯ್ಮತ್ತೂರಿನ ಅಮೃತ ವಿಶ್ವವಿದ್ಯಾಲಯದಲ್ಲಿ ಸಾಂಸ್ಕೃತಿಕ ಅಧ್ಯಯನಗಳ ವಿಭಾಗದಲ್ಲಿ ಉಪನ್ಯಾಸಕನಾಗಿ ವೃತ್ತಿ ಜೀವನ ಮಾಡುತ್ತಿದ್ದಾರೆ. ಅಧ್ಯಯನ ಮತ್ತು ಬರವಣಿಗೆಯಲ್ಲಿ ಆಸಕ್ತಿ. ಬರೆದ ಕಥೆಗಳು ‘ಅಕ್ಕ’ ಕಥಾಸ್ಪರ್ಧೆ, ವಿಜಯವಾಣಿ ಕಥಾಸ್ಪರ್ಧೆ ಮತ್ತಿತರ ಐದು ವಿವಿಧ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದಿವೆ. ಇತ್ತೀಚೆಗೆ ಅನುವಾದದ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ. ಕನ್ನಡ, ಸಂಸ್ಕೃತ ಮತ್ತು ಇಂಗ್ಲೀಷ್ಗಳ ನಡುವೆ ಅನುವಾದ ಮಾಡುತ್ತಿದ್ದಾರೆ. ಕನ್ನಡದಿಂದ ಇಂಗ್ಲೀಷಿಗೆ ‘ಕರ್ಮ’ (ಕರಣಂ ಪವನ್ ಪ್ರಸಾದ್) ಅನುವಾದಿಸಿದ ಬಳಿಕ ಇದೀಗ ಇಂಗ್ಲೀಷಿನಿಂದ ಕನ್ನಡಕ್ಕೆ ‘ನವಜೀವಗಳು’ ಅನುವಾದ.

gangotrinb@gmail.com

Nava JeevagaLu

Reviews

There are no reviews yet.

Be the first to review “Nava JeevagaLu”

Your email address will not be published. Required fields are marked *

Scroll to top