ABOUT THE AUTHOR
ಕಣಾದ ರಾಘವ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲೂಕಿನ ಚಿಪಗೇರಿಯವರು. ಬಾಲ್ಯವನ್ನು ಮಂಡ್ಯ ಜಿಲ್ಲೆಯ ಆದಿಚುಂಚನಗಿರಿಯಲ್ಲಿ ಕಳೆದಿದ್ದಾರೆ. ತಂದೆ ವಿದ್ವಾನ್ ಶ್ರೀ ನರಹರಿ ಕೇಶವ ಭಟ್‌ರವರು ನಿವೃತ್ತ ತರ್ಕಶಾಸ್ತ್ರ ಸಹಪ್ರಾಧ್ಯಾಪಕರು ಮತ್ತು ಸಂಸ್ಕೃತ ಸಾಹಿತಿಗಳು. ತಾಯಿ ಸುಮಂಗಲಾ ಭಟ್. ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದಿಂದ ಆಯುರ್ವೇದ ವೈದ್ಯ ಪದವಿ ಪಡೆದು ಬೆಂಗಳೂರಿನ ಶ್ರೀನಗರದಲ್ಲಿ ನಮನ ಆಯುರ್ವೇದ ಚಿಕಿತ್ಸಾ ಕೇಂದ್ರ ನಡೆಸುತ್ತಿದ್ದಾರೆ. ಪತ್ನಿ ಅಂಜಲಿ ನರ್ಸಿಂಗ್ ಕಾಲೇಜೊಂದರ ಸ್ನಾತಕೋತ್ತರ ಉಪನ್ಯಾಸಕಿ. ಸಂಗೀತ ಮತ್ತು ಚಾರಣದಲ್ಲಿ ಆಸಕ್ತಿಯಿದೆ. ಇದು ಅವರ ಮೊದಲ ಪುಸ್ತಕ.
dr.kanada@gmail.com
Reviews
There are no reviews yet.