ABOUT THE AUTHOR
೧೯೬೮ರಲ್ಲಿ ಜನನ. ಕಟ್ಟಡ ವಿನ್ಯಾಸಕ. ಪ್ರಾಗ್ರೂಪ ಅಮೂರ್ತಸಿಟಿ ಇವರ ವೃತ್ತಿಪರ ಅಭ್ಯಾಸದ ಹೆಸರು. ಬೆಂಗಳೂರಿನ ಪ್ರತಿಷ್ಠಿತ ಕಟ್ಟಡಗಳನ್ನು ವಿನ್ಯಾಸ ಮಾಡಿರುವ ಅನುಭವವಿದೆ. ೨೦೦೨ರಲ್ಲಿ Architecture + Design ಎಂಬ ರಾಷ್ಟ್ರೀಯ ಮಟ್ಟದ ಡಿಸೈನ್ ಜರ್ನಲು ಇವರನ್ನು ದೇಶದ ಹತ್ತು ಪ್ರತಿಭಾವಂತ ಯುವ ಆರ್ಕಿಟೆಕ್ಟುಗಳಲ್ಲಿ ಒಬ್ಬರೆಂದು ಗುರುತಿಸಿತ್ತು. ಸ್ಪೆಕ್ಟ್ರಮ್ ಫೌಂಡೇಶನಿನ ಉತ್ಕೃಷ್ಟ ವಿನ್ಯಾಸಕ- ೨೦೦೩ರ ಪ್ರಶಸ್ತಿಯನ್ನು ಪಡೆದಿದ್ದಾರೆ. ಬೆಂಗಳೂರಿನ ಸರಿ ಸುಮಾರು ಎಲ್ಲಾ ವಾಸ್ತುಶಿಲ್ಪ ಶಾಲೆಗಳಲ್ಲಿ ಅತಿಥಿ-ಬೋಧಕರಾಗಿದ್ದಾರೆ.
ಸಾಹಿತ್ಯ ಇವರ ಇತ್ತೀಚಿನ ಆಸಕ್ತಿ. ೨೦೦೨ರಿಂದ ಕತೆ, ಕವನ, ಲೇಖನಗಳನ್ನು ಬರೆಯುತ್ತಿದ್ದಾರೆ. ಹಕೂನ ಮಟಾಟ (೨೦೦೭) ಕಥಾಸಂಕಲನ ಡಾ. ಯು. ಆರ್. ಅನಂತಮೂರ್ತಿ ಪ್ರಶಸ್ತಿಯನ್ನು ಪಡೆದುಕೊಂಡಿದೆ. ‘ಹಳೆಮನೆ ಕತೆ, ‘ಬಯಲು ಆಲಯ ಮತ್ತು ಪಟ್ಟಣ ಪುರಾಣ ಇವರ ಅಂಕಣಗಳು.
ತಾಯಿ ಶಾಂತಾಮಣಿ ಮತ್ತು ಮಡದಿ ಅಪರ್ಣಾ.
vastarey@vastareysmdc.co.in
Reviews
There are no reviews yet.