Leriyonka

80.00

ಈ ಕೃತಿಯ ಕುರಿತು ಹಿರಿಯ ವಿಮರ್ಶಕರಾದ ರಹಮತ್ ತರೀಕೆರೆ ಈ ರೀತಿ ಅಭಿಪ್ರಾಯ ಪಡುತ್ತಾರೆ.

ದನಗಾಹಿ ಬುಡಕಟ್ಟಿನ ಒಬ್ಬ ಮುಗ್ಧ ಹುಡುಗ, ತನ್ನ ಹಾಡಿಯನ್ನು ಬಿಟ್ಟು ಶಾಲೆಗೆಂದು ನಗರಕ್ಕೆ ಹೋಗುವ ಮೂಲಕ ಶುರುವಾಗಿ, ಆತ ಆಧುನಿಕ ಶಿಕ್ಷಣ ಪಡೆದು ತರುಣನಾಗಿ ಮರಳಿ ಬರುವವರೆಗಿನ ಅನುಭವಗಳನ್ನು ಈ ಕಾದಂಬರಿ ಒಳಗೊಂಡಿದೆ. ಇಡೀ ಕಥೆ ಒಂದು ದೀರ್ಘ ಪಯಣದ ವಿನ್ಯಾಸದಲ್ಲಿದೆ. ಈ ಮಹಾಪಯಣ ಕಥಾನಾಯಕನದು ಮಾತ್ರವಲ್ಲ, ಕಳೆದ ಶತಮಾನದಲ್ಲಿ ಆಫ್ರಿಕನ್ ಸಮುದಾಯಗಳು ಮಾಡಿದ್ದೂ ಕೂಡ. ಆದ್ದರಿಂದಲೇ ಕಾದಂಬರಿಯು ನಾಯಕನ ಆತ್ಮಚರಿತ್ರೆಯ ವಿನ್ಯಾಸ ದಲ್ಲಿದ್ದರೂ, ಅದು ಮಾಸಯಿ ಸಮುದಾಯ ಮತ್ತು ಕೀನ್ಯಾ ದೇಶಗಳ ಸ್ಥಿತ್ಯಂತರದ ಚರಿತ್ರೆಯೂ ಆಗಿದೆ. ರೋಚಕವೂ, ಮಾನವೀಯವೂ ವಿನೋದಪೂರ್ಣವೂ, ಕರುಣಾಜನಕವೂ ಆದ ಘಟನಾವಳಿಗಳಿಂದ ಕೂಡಿರುವ ಇಲ್ಲಿನ ಕಥನ ಅಪೂರ್ವವಾಗಿದೆ, ಕಾವ್ಯಮಯವಾಗಿದೆ.

ಇದನ್ನು ಓದುವಾಗ ಕುವೆಂಪು ಕಾದಂಬರಿಗಳು ನೆನಪಾಗುತ್ತವೆ; ಆಫ್ರಿಕನ್ ಲೇಖಕರಾದ ಶೋಯಿಂಕಾ, ಅಚಿಬೆ, ಗೂಗಿ ಅವರ ಕೃತಿಗಳು ನೆನಪಾಗುತ್ತವೆ. ಇವೆಲ್ಲವೂ ದೇಶೀ ಸಮಾಜಗಳು ಯುರೋಪಿಯನ್ ಆಧುನಿಕತೆಯ ಜತೆ ಮುಖಾಮುಖಿ ಮಾಡುವಾಗ ಹುಟ್ಟಿದ ಸಮಸ್ತ ತಲ್ಲಣಗಳನ್ನು ಒಳಗೊಂಡಿವೆ. ಪಶ್ಚಿಮದ ಜತೆ ಸೆಣಸಾಟ ಮಾಡಿದ ಎಲ್ಲ ನಾಡುಗಳ ರುದ್ರಾನುಭವವಿದು. ಅತಿಕ್ರಮಣದ ಜತೆ ಬಂದ ಶಿಕ್ಷಣ- ವೈಚಾರಿಕತೆಗಳನ್ನು ತ್ಯಜಿಸುವಂತಿಲ್ಲ; ಅವುಗಳ ಜತೆಗೇ ಇರುವ ರಾಜಕೀಯ ದಮನವನ್ನು ಸಹಿಸುವಂತಿಲ್ಲ; ಸ್ಥಳೀಯ ಬುಡಕಟ್ಟು ಸಂಸ್ಕೃತಿಗಳ ಚಹರೆಯನ್ನು ತ್ಯಜಿಸುವಂತಿಲ್ಲ; ಅವುಗಳ ಜಡತೆಯನ್ನು ಇಟ್ಟುಕೊಳ್ಳುವಂತಿಲ್ಲ. ಇದೊಂದು ದ್ವಂದ್ವಾತ್ಮಕ ಸೆಣಸಾಟ. ಈ ಸೆಣಸಾಟವು ಒಂದು ಕೈಯಲ್ಲಿ ಪುಸ್ತಕವನ್ನೂ ಮತ್ತೊಂದು ಕೈಯಲ್ಲಿ ಭರ್ಜಿಯನ್ನೂ ಹಿಡಿಯುವ ಲೇರಿಯೊಂಕನ ಚಿತ್ರದಲ್ಲಿ ಮಾರ್ಮಿಕವಾಗಿ ವ್ಯಕ್ತವಾಗಿದೆ.

ಪ್ರಶಾಂತ್ ಬೀಚಿ ಈ ಕಾದಂಬರಿಯನ್ನು ಅತ್ಯಂತ ಆಪ್ತವಾಗಿ ಕನ್ನಡಕ್ಕೆ ತಂದಿದ್ದಾರೆ.

Check on Google Playstore

Category:

ABOUT THE AUTHOR

ಮಾಸಯಿ ಜನರ ಸಂಸ್ಕೃತಿಯನ್ನು ಅತ್ಯಂತ ಪ್ರೀತಿಯಿಂದ ಬರೆದ ಕೀನ್ಯಾ ದೇಶದ ಜನಪ್ರಿಯ ಕಾದಂಬರಿಕಾರ. ತನ್ನೆಲ್ಲಾ ಕಾದಂಬರಿಗಳನ್ನು ಇಂಗ್ಲೀಷ್ ಭಾಷೆಯಲ್ಲಿಯೇ ಬರೆದಿದ್ದಾರೆ. ೧೯೭೧ರಲ್ಲಿ ಬರೆದ ಈ ಸುಪ್ರಸಿದ್ಧ ಕಾದಂಬರಿ (ಈಜ್ ಇಟ್ ಪಾಸಿಬಲ್) ಕೀನ್ಯಾ ಮತ್ತು ತಾಂಜಾನಿಯ ದೇಶದಲ್ಲಿ ಶಾಲಾ ಮಕ್ಕಳ ಪಠ್ಯಪುಸ್ತಕವಾಗಿದೆ. ಟು ಬಿಕಮ್ ಎ ಮ್ಯಾನ್ (೧೯೭೨), ದಿ ಹಂಟರ್ (೧೯೮೫), ಡಾಟರ್ ಆಫ್ ಎ ಮಾ (೧೯೮೭), ಮೋರನ್ ನೊ ಮೋರ್ (೧೯೯೦) – ಇವರ ಇತರ ಪ್ರಸಿದ್ಧ ಕಾದಂಬರಿಗಳು. ಸದ್ಯ ಲೇಖಕರು ಕೀನ್ಯಾ ದೇಶದಲ್ಲಿ ವಾಸಿಸುತ್ತಿದ್ದಾರೆ.

೧೯೭೬ರಲ್ಲಿ ಜನನ. ಓದಿ ಬೆಳೆದದ್ದು ಬೀರೂರು, ಶಿವಮೊಗ್ಗ ಮತ್ತು ಬೆಂಗಳೂರಲ್ಲಿ. ಭಾರತದಲ್ಲಿ ಏಳು ವರ್ಷ ಕೆಲಸ ಮಾಡಿ ಈಗ ಪೂರ್ವ ಆಫ್ರಿಕಾದ ತಾಂಜಾನಿಯ ದೇಶದಲ್ಲಿ ಮಡದಿ ಹಾಗೂ ಎರಡು ವರ್ಷದ ಮಗನೊಂದಿಗೆ ವಾಸ. ಬೆನ್ಸನ್ ಇನ್‌ಫಾರ್ಮಟಿಕ್ಸ್‌ನಲ್ಲಿ ನೆಟ್‌ವರ್ಕ್ ಮ್ಯಾನೇಜರ್. ಕನ್ನಡದ ಪ್ರಮುಖ ನಿಯತಕಾಲಿಕಗಳಲ್ಲಿ ಮತ್ತು ದಟ್ಸ್ ಕನ್ನಡ ಅಂತರ್ಜಾಲ ಪತ್ರಿಕೆಯಲ್ಲಿ ಕತೆ, ಕವನ, ಲೇಖನಗಳು ಪ್ರಕಟವಾಗಿವೆ. ಪ್ರಶಾಂತ್ ಬೀರೂರು ಚಿಕ್ಕಣ್ಣ ದೇವರು ಎಂಬ ಹೆಸರೇ ‘ಪ್ರಶಾಂತ್ ಬೀಚಿ’ಯಾಗಿದೆ. ತಂದೆ, ತಾಯಿ ಮತ್ತು ಅಕ್ಕಂದಿರು ಕರ್ನಾಟಕದಲ್ಲಿ ವಾಸಿಸುತ್ತಾರೆ. ಲೇರಿಯೊಂಕ ಇವರ ಮೊದಲ ಕೃತಿ.

Prashbirur@gmail.com

prashanthbc@hotmail.com

Leriyonka

Reviews

There are no reviews yet.

Be the first to review “Leriyonka”

Your email address will not be published. Required fields are marked *

Scroll to top