Kepina Dabbi

60.00

ಛಂದ ಪುಸ್ತಕ ಬಹುಮಾನ ಪಡೆದ ಕಥಾಸಂಕಲನ. ಈ ಕಥಾಸಂಕಲನ ನಾಡಿನ ಹಲವಾರು ಪ್ರಮುಖ ಪ್ರಶಸ್ತಿಗಳನ್ನು ಗಳಸಿದ್ದಲ್ಲದೆ, ಕೇಂದ್ರ ಸಾಹಿತ್ಯ ಅಕಾದೆಮಿಯ ಯುವ ಪುರಸ್ಕಾರವನ್ನೂ ಪಡೆದುಕೊಂಡಿದೆ. ಕನ್ನಡದಲ್ಲಿ ವಿಶೇಷವಾಗಿ ಓದುಗರು ಚರ್ಚೆ ಮಾಡಿದ ಕೃತಿ ಇದಾಗಿದೆ.

Check on Google Playstore

Category:

ABOUT THE AUTHOR

ಉತ್ತರ ಕನ್ನಡದ ಅಂಕೋಲೆಯ ಗಂಗಾವಳಿ ನದಿ ಸೆರಗಿನಲ್ಲಿನ ಶೇವ್ಕಾರ ಎಂಬ ಪುಟ್ಟ ಊರು. ಹುಟ್ಟಿದ್ದು 1990ರಲ್ಲಿ. ಪಿಯುಸಿವರೆಗೆ ಊರಲ್ಲಿಯೇ ಓದು. ನಂತರ ಹುಬ್ಬಳ್ಳಿಯಲ್ಲಿ ಬಿ.ಎ. ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ಎಂ.ಎ; 2013 ನವೆಂಬರ್‍ನಿಂದ ‘ಪ್ರಜಾವಾಣಿ’ ದಿನಪತ್ರಿಕೆಯಲ್ಲಿ ವೃತ್ತಿಬದುಕು ಆರಂಭ. ಓದು-ಬರಹ ಬರೀ ಹವ್ಯಾಸವಷ್ಟೇ ಅಲ್ಲವೇ ಅಲ್ಲ. ಅದನ್ನು ಹೊರತುಪಡಿಸಿ ಸಿನಿಮಾ, ರಂಗಭೂಮಿ, ಪರ್ಯಟನೆಗಳಲ್ಲಿಯೂ ಆಸಕ್ತ.

ಇವರ ಮೊದಲ ಕಥಾಸಂಕಲನ ‘ಕೇಪಿನ ಡಬ್ಬಿ’ಗೆ ಕೇಂದ್ರ ಸಾಹಿತ್ಯ ಅಕಾದೆಮಿ ಯುವ ಪುರಸ್ಕಾರ, ಕರ್ನಾಟಕ ಸಾಹಿತ್ಯ ಅಕಾಡೆಮಿ ದತ್ತಿ ಬಹುಮಾನ, ಛಂದ ಪುಸ್ತಕ ಬಹುಮಾನ, ಮಾಸ್ತಿ ಕಥಾ ಪುರಸ್ಕಾರ, ಶಾ. ಬಾಲೂರಾವ್ ಯುವ ಬರಹಗಾರ ಪ್ರಶಸ್ತಿ ಹಾಗೂ ಟೋಟೋ ಪುರಸ್ಕಾರಗಳು ಲಭಿಸಿವೆ. ಕನ್ನಡಿಹರಳು ಅವರ ಎರಡನೆಯ ಕಥಾಸಂಕಲನ.

padmanabh.shevkar@gmail.com

Kepina Dabbi

Reviews

There are no reviews yet.

Be the first to review “Kepina Dabbi”

Your email address will not be published. Required fields are marked *

Scroll to top