ABOUT THE AUTHOR
ಎಸ್ ಸುರೇಂದ್ರನಾಥ್ ಹುಟ್ಟಿದ್ದು ಮೂಡಬಿದಿರೆಯಲ್ಲಿ. ಓದಿ ಬೆಳೆದದ್ದು ದಾವಣಗೆರೆಯಲ್ಲಿ. ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದಲ್ಲಿ ತರಬೇತಿ. ಹುಲಗೂರ ಹುಲಿಯವ್ವ, ಮರ್ಯಾದೆ ಪ್ರಶ್ನೆ, ನೀ ನಾನಾದ್ರೆ ನಾ ನೀನೇನಾ, ಜನತೆಯ ಶತ್ರು, ಒಂದು ಆಕಸ್ಮಿಕ ಸಾವು, ನಾ ತುಕಾರಾಮ್ ಅಲ್ಲ, ಸಂಕ್ರಮಣ, ಷೈಲಾಕ್, ಸರ್ಕಲ್ ಆಫ್ ಲೈಫ್ – ಬರೆದು ನಿರ್ದೇಶಿಸಿದ ಮುಖ್ಯ ನಾಟಕಗಳು. ನಾಗಮಂಡಲ, ಆತಂಕ, ಕಾನೂರು ಹೆಗ್ಗಡತಿ, ಕೆಂಡಸಂಪಿಗೆ – ಮುಂತಾದ ಅನೇಕ ಚಲನಚಿತ್ರಗಳಿಗೆ ಕತೆ, ಚಿತ್ರಕತೆ ಮತ್ತು ಸಂಭಾಷಣೆ. ಹದಿಮೂರು ವರ್ಷ `ಈಟೀವಿ’ಯಲ್ಲಿ ಕಾರ್ಯಕ್ರಮಗಳ ಜವಾಬ್ದಾರಿ. ಜಗತ್ತಿನ ಅನೇಕ ನಾಟಕೋತ್ಸವಗಳಿಗೆ ವಿಶೇಷ ಆಹ್ವಾನಿತ. ಕಟ್ಟು ಕತೆಗಳು, ತಾಪತ್ರಯ – ಕಥಾಸಂಕಲನಗಳು. ಗಾಳಿಗೆ ಬಿದ್ದ ಚಂದ್ರನ ತುಂಡುಗಳು ಇನ್ನೊಂದು ಕಾದಂಬರಿ. ಪ್ರಸ್ತುತದಲ್ಲಿ ರಂಗಶಂಕರದ ನಿರ್ದೇಶಕ.
surisurendranath@gmail.com
Reviews
There are no reviews yet.