ABOUT THE AUTHOR
ಸುಬ್ರೊತೊ ಬಾಗ್ಚಿಯವರು ಭಾರತದ ಅತ್ಯಂತ ಮೆಚ್ಚುಗೆ ಪಡೆದ ಸಾಫ್ಟ್ವೇರ್ ಕಂಪನಿಗಳ ಲ್ಲೊಂದಾದ ಮೈಂಡ್ಟ್ರೀ ಕಂಪನಿಯ ಸಹಸ್ಥಾಪಕರು ಮತ್ತು ಚೇರ್ಮನ್. ಅವರು ಬಲು ಬೇಡಿಕೆಯಲ್ಲಿರುವ ಬಿಸಿನೆಸ್ ಪುಸ್ತಕಗಳ ಪ್ರಖ್ಯಾತ ಲೇಖಕರು. The High Performance Entrepreneur, Go Kiss the World ಮತ್ತು The Professional ಅವರ ಕೃತಿಗಳು. ತರುಣ ಪೀಳಿಗೆಗಾಗಿ ಬರೆದ ಅವರ ಬಿಸಿನೆಸ್ ಪುಸ್ತಕ, MBA At 16 ೨೦೧೨ ರಲ್ಲಿ ಪ್ರಕಟವಾಯಿತು. ಸುಬ್ರೊತೊ ಬಾಗ್ಚಿಯವರ ಪುಸ್ತಕಗಳು ಹಿಂದಿ, ಮರಾಠಿ, ಮಲಯಾಳಂ, ತಮಿಳು, ಕನ್ನಡ, ಕೊರಿಯನ್ ಮತ್ತು ಚೈನೀಸ್ ಭಾಷೆಗಳಿಗೆ ಅನುವಾದಗೊಂಡಿವೆ. ಸುಬ್ರೊತೊ ಅವರು ತಮ್ಮ ಪತ್ನಿ ಲೇಖಕಿ ಸುಸ್ಮಿತಾರೊಂದಿಗೆ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ಅವರಿಗೆ ನೇಹಾ ಮತ್ತು ನೀತಿ ಎಂಬ ಇಬ್ಬರು ಹೆಣ್ಣುಮಕ್ಕಳಿದ್ದಾರೆ.
ಹುಟ್ಟಿದ್ದು ದಾವಣಗೆರೆ. ಬಾಲ್ಯ ಕಳೆದದ್ದು, ಬೆಳೆದದ್ದು ಮತ್ತು ವಿದ್ಯಾಭ್ಯಾಸ ಉತ್ತರ ಕರ್ನಾಟಕದ ಹಲವು ಊರುಗಳಲ್ಲಿ. ದಾವಣಗೆರೆಯ ಬಿ.ಡಿ.ಟಿ.ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಇ. ಪದವಿ ಪಡೆದು, ಕೆಲಸಕ್ಕಾಗಿ ಬಂದದ್ದು ಬೆಂಗಳೂರಿಗೆ. ಐ.ಟಿ.ಐ.ನಲ್ಲಿ ಆರಂಭಿಸಿದ ವೃತ್ತಿ ಜೀವನ ಸಾಫ್ಟ್ವೇರ್ಗೆ ಹೊರಳಿತು. ಎಚ್.ಪಿ. (ಹ್ಯೂಲೆಟ್ ಪ್ಯಾಕರ್ಡ್)ನಲ್ಲಿ ಹತ್ತೊಂಭತ್ತು ವರ್ಷಗಳ ಕಾಲ ಕೆಲಸ ಮಾಡಿ, ಪ್ರೋಗ್ರಾಮ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸಿ, ೨೦೧೨ ರಲ್ಲಿ ಸ್ವಯಂ ನಿವೃತ್ತಿ. ಕೆಲವು ಲೇಖನಗಳು ಈ ಮೊದಲು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಪತಿ ಸತೀಶ್ ಮತ್ತು ಮಗ ನಿಶಾಂತ್ ವಸಿಷ್ಠನೊಂದಿಗೆ ಬೆಂಗಳೂರಿನಲ್ಲಿ ವಾಸ. ಇದು ಇವರ ಮೊದಲ ಪುಸ್ತಕ.
vandupat@gmail.com
Reviews
There are no reviews yet.