ABOUT THE AUTHOR
ಗುರುಪ್ರಸಾದ ಕಾಗಿನೆಲೆ ಹುಟ್ಟಿದ್ದು ಶಿವಮೊಗ್ಗ. ಬೆಳೆದದ್ದು ಮೈಸೂರು ಮತ್ತು ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ. ಬಳ್ಳಾರಿಯ ಸರಕಾರಿ ವೈದ್ಯಕೀಯ ವಿದ್ಯಾಲಯದಲ್ಲಿ ಎಂಬಿಬಿಎಸ್ ಮತ್ತು ಎಂಡಿ ಪದವಿ. ಆನಂತರ ದೆಹಲಿಯ ಭತ್ರ ಆಸ್ಪತ್ರೆಯ ನೆಫ಼್ರಾಲಜಿ ವಿಭಾಗದಲ್ಲಿ ಸೀನಿಯರ್ ರೆಸಿಡೆನ್ಸಿ. ೧೯೯೫ರಲ್ಲಿ ಅಮೆರಿಕೆಗೆ ವಲಸೆ. ಡೆಟ್ರಾಯ್ಟ್‌ನ ವೇಯ್ನ್‌ಸ್ಟೇಟ್ ವಿಶ್ವವಿದ್ಯಾನಿಲಯ ಹಾಗೂ ವಿಸ್ಕಾನ್ಸಿನ್ ವಿಶ್ವವಿದ್ಯಾನಿಲಯಗಳಲ್ಲಿ ತರಬೇತಿ. ಸದ್ಯಕ್ಕೆ ಮಿನೆಸೊಟಾ ರಾಜ್ಯದ ರಾಚೆಸ್ಟರ್‌ನಲ್ಲಿ ಪತ್ನಿ ಪದ್ಮ ಮತ್ತು ಮಕ್ಕಳಾದ ಪ್ರಣಿತ ಮತ್ತು ಪ್ರಭವರೊಟ್ಟಿಗೆ ವಾಸ. ನಾರ್ತ್ ಮೆಮೊರಿಯಲ್ ಆಸ್ಪತ್ರೆಯ ಎಮರ್ಜೆನ್ಸಿ ಮೆಡಿಸಿನ್ ವಿಭಾಗದಲ್ಲಿ ಎಮರ್ಜೆನ್ಸಿ ವೈದ್ಯನಾಗಿ ಕೆಲಸ. ಕೆಲವು ಸಣ್ಣಕತೆಗಳು ಯುಗಾದಿ ಕಥಾಸ್ಪರ್ಧೆಯಲ್ಲಿ ಬಹುಮಾನ ಪಡೆದಿವೆ. ಪ್ರಕಟಿತ ಕಥಾಸಂಕಲನಗಳು: ನಿರ್ಗುಣ(೨೦೦೩), ಶಕುಂತಳಾ (೨೦೦೭) ಲೇಖನ ಸಂಗ್ರಹ: ವೈದ್ಯ, ಮತ್ತೊಬ್ಬ (೨೦೦೫). ಸಂಪಾದಿತ ಕಥಾಸಂಕಲನ: ಆಚೀಚೆ ಕತೆಗಳು (೨೦೦೬). ಕಾದಂಬರಿ: ಬಿಳಿಯ ಚಾದರ(೨೦೦೭) ಮತ್ತು ‘ಗುಣ(೨೦೧೦). ವೈದ್ಯ, ಮತ್ತೊಬ್ಬ ಕೃತಿಗೆ ೨೦೦೫ರ ಡಾ. ಪಿ ಎಸ್. ಶಂಕರ್ ಶ್ರೇಷ್ಠ ವೈದ್ಯ ಸಾಹಿತ್ಯ ಪ್ರಶಸ್ತಿ ಲಭಿಸಿದೆ. ಕೆಲವು ಕತೆಗಳು ಮರಾಠಿ, ಕೊಂಕಣಿ ಮತ್ತು ತೆಲುಗು ಭಾಷೆಗಳಿಗೆ ಅನುವಾದವಾಗಿವೆ.
gkaginele@gmail.com
Reviews
There are no reviews yet.