Baree Eradu Rekke

140.00

ಕನ್ನಡ ಹಿರಿಯ ಕತೆಗಾರ್ತಿ ಸುನಂದಾ ಪ್ರಕಾಶ ಕಡಮೆ ಅವರ ಮೊದಲ ಕಾದಂಬರಿಯಿದು. ಉತ್ತರ ಕನ್ನಡದ ಹಾಲಕ್ಕಿ ಜನಾಂಗದ ಭಾಷೆಯನ್ನು ವಿಶೇಷವಾಗಿ ಈ ಕೃತಿಯಲ್ಲಿ ಬಳಸಲಾಗಿದೆ. ಸಂಪೂರ್ಣವಾಗಿ ಉ.ಕ. ಜಿಲ್ಲೆಯ ಬದುಕಿನ ವಿವರಗಳನ್ನು ಕಟ್ಟಿ ಕೊಡುವ ಈ ಕಾದಂಬರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪುಸ್ತಕ ಬಹುಮಾನವೂ ಲಭಿಸಿದೆ. ಮುಂಬಯಿಯ ವಿಶ್ವವಿದ್ಯಾಲಯದಲ್ಲಿ ಈ ಕಾದಂಬರಿ ಪಠ್ಯವಾಗಿ ನೇಮಕಗೊಂಡಿದ್ದು ಇದರ ಮತ್ತೊಂದು ಹಿರಿಮೆ.

Check on Google Playstore

Category:

ABOUT THE AUTHOR

ಜನನ: ೧೯೬೭, ಉತ್ತರ ಕನ್ನಡದ ಅಲಗೇರಿಯಲ್ಲಿ. ಹುಬ್ಬಳ್ಳಿಯ ಮಹಿಳಾ ಕಾಲೇಜಿನಲ್ಲಿ ಬಿ.ಕಾಂ ಮತ್ತು ಕರ್ನಾಟಕ ವಿ.ವಿ. ಧಾರವಾಡದಲ್ಲಿ ಕನ್ನಡ ಎಂ.ಎ. ಗೋಕರ್ಣ-ಹನೇಹಳ್ಳಿ ಮಧ್ಯೆ ಇರುವ ಕಡಮೆ ಊರಿನವರಾದ ಪ್ರಕಾಶ್‌ರೊಂದಿಗೆ ಗೃಹಿಣಿಯಾಗಿ ಸಧ್ಯ ಹುಬ್ಬಳ್ಳಿಯಲ್ಲಿ ವಾಸ. ಮಕ್ಕಳು: ಕಾವ್ಯ ಮತ್ತು ನವ್ಯ. ೧೯೯೭ ರಿಂದ ಬರವಣಿಗೆ ಆರಂಭ. ಪುಟ್ಟ ಪಾದದ ಗುರುತು (೨೦೦೫) ಗಾಂಧಿ ಚಿತ್ರದ ನೋಟು (೨೦೦೮) ಇವೆರಡು ಕಥಾ ಸಂಕಲನಗಳು. ಪಿಸುಗುಡುವ ಬೆಟ್ಟಸಾಲು (೨೦೦೬) ಪಡುವಣದ ಕಡಲು (೨೦೦೮) ಇವೆರಡು ನುಡಿಚಿತ್ರ ಸಂಕಲನಗಳು. ಸೀಳುದಾರಿ (೨೦೦೯) ಇದು ಕವನ ಸಂಕಲನ. ಛಂದ ಪುಸ್ತಕ ಬಹುಮಾನ, ಬೆಸಗರಹಳ್ಳಿ ರಾಮಣ್ಣ ಪುಸ್ತಕ ಬಹುಮಾನ. ಬಿಎಂಶ್ರೀ ಕಥಾ ಪುಸ್ತಕ ಬಹುಮಾನ, ಡಿ.ಎಸ್ ಕರ್ಕಿ ಕಾವ್ಯ ಬಹುಮಾನ, ರತ್ನಮ್ಮ ಹೆಗ್ಗಡೆ ಹಾಗೂ ಎಂ.ಕೆ ಇಂದಿರಾ ಬಹುಮಾನ ಸೇರಿದಂತೆ ಇನ್ನೂ ಅನೇಕ ಪುರಸ್ಕಾರಗಳು ಇವರ ಸಂಕಲನಗಳಿಗೆ ಸಂದಿವೆ. ಇವರ ಕೆಲವು ಕತೆಗಳು ಕೊಂಕಣಿ, ತಮಿಳು, ಮಲಯಾಳ ಹಾಗೂ ಇಂಗ್ಲಿಷ ಭಾಷೆಗಳಿಗೆ ಅನುವಾದಗೊಂಡಿವೆ. ಈ ಕೃತಿ ಇವರ ಮೊದಲ ಕಾದಂಬರಿ.

sunandakadame@gmail.com

Baree Eradu Rekke

Reviews

There are no reviews yet.

Be the first to review “Baree Eradu Rekke”

Your email address will not be published. Required fields are marked *

Scroll to top