ABOUT THE AUTHOR
ವಿಕಿ ಕಾನ್ಸ್ಟಂಟೇನ್ ಕ್ರುಕ್ ಅವರು ಕಳೆದ ಎರಡು ದಶಕಗಳಿಗೂ ಹೆಚ್ಚು ಸಮಯದಿಂದ ಪ್ರಾಣಿಜೀವನದ ಕುರಿತು ಸಂಶೋಧನೆ ನಡೆಸುತ್ತಿದ್ದು – ಮಡಗಾಸ್ಕರ್ನಲ್ಲಿ ಫೋಸ್ಸಾಗಳನ್ನು[1] ಹಿಂಬಾಲಿಸುತ್ತಾ, ಆರ್ಕ್ಟಿಕ್ ಪ್ರದೇಶದ ಧ್ರುವಗಳಲ್ಲಿ ಹಿಮಕರಡಿಗಳನ್ನು ಅರಸುತ್ತಾ, ಟಾಸ್ಮೇನಿಯಾದಲ್ಲಿ ಟಾಸ್ಮೇನಿಯನ್ ಡೆವಿಲ್ನನ್ನು [2]ಅಭ್ಯಸಿಸುತ್ತಾ ಮುಂದುವರಿದಿದ್ದು ಪ್ರಾಣಿಶಾಸ್ತ್ರದ ವಿಷಯದಲ್ಲಿ ಸಾಕಷ್ಟು ಕೆಲಸಮಾಡಿದ್ದಾರೆ. WBUR- FM ನಲ್ಲಿ, ಬಾಸ್ಟನ್ನ ಎನ್ ಪಿ ಆರ್ ನ್ಯೂಸ್ ಸ್ಟೇಶನ್ನಲ್ಲಿ, ಪ್ರಸಿದ್ಧ “ಹಿಯರ್ ಅಂಡ್ ನೌ” ದೂರದರ್ಶನ ಕಾರ್ಯಕ್ರಮದಲ್ಲಿ, ಮತ್ತು WBUR ನ ದಿ ವೈಲ್ಡ್ ಲೈಫ್ ಆನ್ಲೈನ್ ವೆಬ್ಸೈಟಿನಲ್ಲಿ ಹೀಗೆ ಹಲವೆಡೆಗಳಲ್ಲಿ ವಿಶ್ವದ ಪ್ರಾಣಿಜಗತ್ತಿನ ಸಮಸ್ಯೆಗಳ ಬಗ್ಗೆ, ಅವುಗಳನ್ನು ನಿವಾರಿಸುವುದರ ಬಗ್ಗೆ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಾರೆ. ಈ ನಿಟ್ಟಿನಲ್ಲಿ ಅವರ ಪರಿಶ್ರಮಕ್ಕೆ ಸಂದ ಗೌರವವಾಗಿ 2013ನೇ ಸಾಲಿನ ಎಡ್ವರ್ಡ್ ಆರ್. ಮರ್ರೋ ಪ್ರಶಸ್ತಿಯು ಅವರನ್ನರಸಿ ಬಂದಿದೆ. ಅವರ ಇದುವರೆಗಿನ ಪ್ರಮುಖ ಕೃತಿಗಳು – ‘ದಿ ಲೇಡಿ ಅಂಡ್ ದಿ ಪಾಂಡಾ’, ‘ದಿ ಮಾಡರ್ನ್ ಆರ್ಕ್ : ದಿ ಸ್ಟೋರಿ ಆಫ್ ಝೂಸ್ – ಪಾಸ್ಟ್, ಪ್ರಸಂಟ್ ಅಂಡ್ ಫ್ಯೂಚರ್’ ಮತ್ತು ‘ಎಲಿಫೆಂಟ್ ಕಂಪೆನಿ’. ಇವಿಷ್ಟೇ ಅಲ್ಲದೆ ಕ್ರುಕ್ ಅವರು ಸುಪ್ರಸಿದ್ಧ ಡಿಸ್ನಿ ಮತ್ತು ಎ ಅಂಡ್ ಇ ವಾಹಿನಿಗಳಿಗಾಗಿ ಹಲವಾರು ಡಾಕ್ಯುಮೆಂಟರಿಗಳನ್ನು ನಿರ್ಮಿಸುವುದರಲ್ಲೂ ಶ್ರಮಿಸಿದ್ದಾರೆ. NECN ಟಿವಿಯ ‘ದಿ ಸೀಕ್ರೆಟ್ ಲೈಫ್ ಆಫ್ ಅನಿಮಲ್ಸ್’ ಕಾರ್ಯಕ್ರಮದ ನಿರ್ವಹಣೆ ಮಾಡಿದ್ದಾರೆ. ಸತತ ಹದಿಮೂರು ವರ್ಷಗಳ ಕಾಲ ದಿ ಬಾಸ್ಟನ್ ಗ್ಲೋಬ್ ಪತ್ರಿಕೆಯಲ್ಲಿ ‘ಅನಿಮಲ್ ಬೀಟ್’ ಅಂಕಣವನ್ನು ಅದ್ಭುತವಾಗಿ ಬರೆದಿದ್ದಾರೆ. ದಿ ನ್ಯೂಯಾರ್ಕ್ ಟೈಮ್ಸ್ , ದಿ ವಾಷಿಂಗ್ಟನ್ ಪೋಸ್ಟ್, ದಿ ಲಂಡನ್ ಸಂಡೇ ಟೆಲಿಗ್ರಾಫ್, ಟೈಮ್, ಪಾಪ್ಯುಲರ್ ಸಯನ್ಸ್, ಓ – ದಿ ಒಪೆರಾ ಮ್ಯಾಗಜೀನ್, ಗಾರ್ಮೆಟ್, ನೇಶನಲ್ ವೈಲ್ಡ್ಲೈಫ್, ಡಿಸ್ಕವರ್ ಮ್ಯಾಗಜೀóನ್ – ಹೀಗೆ ಹತ್ತುಹಲವು ಪತ್ರಿಕೆಗಳಿಗೆ ನಿರಂತರವಾಗಿ ಬರೆಯುತ್ತಿದ್ದಾರೆ. ಪ್ರಸ್ತುತ ಅಮೆರಿಕೆಯ ಬಾಸ್ಟನ್ನಲ್ಲಿ ನೆಲೆಸಿದ್ದಾರೆ.
www.vickicroke.com
[1] ಫೋಸ್ಸಾ – ಮಡಗಾಸ್ಕರ್ನಲ್ಲಿನ ದೊಡ್ಡ ಮಾಂಸಾಹಾರಿ ಕಾಡುಪ್ರಾಣಿ, ನೋಡಲು ನಾಯಿ, ಬೆಕ್ಕು ಮತ್ತು ಮುಂಗುಸಿಗಳ ಮಿಶ್ರಣದಂತೆ ತೋರುವುದು.
[2] ಟಾಸ್ಮೇನಿಯನ್ ಡೆವಿಲ್ – ಇನ್ನೊಂದು ಬಗೆಯ ವಿಶೇಷವಾದ ಮಾಂಸಾಹಾರಿ ಕಾಡುಪ್ರಾಣಿ. ಟಾಸ್ಮೇನಿಯಾದಲ್ಲಿ ಕಾಣಸಿಗುವ ಇದು ಈಗ ಅಳಿವಿನಂಚಿನಲ್ಲಿದೆ.
ರಾಜ್ಯಶ್ರೀ ಮೂಲತಃ ಗಡಿನಾಡಾದ ಕಾಸರಗೋಡಿನವಳು. ಬಾಲ್ಯದಿಂದಲೇ ಸಾಹಿತ್ಯಕ ವಾತಾವರಣದಲ್ಲಿ ಬೆಳೆದು ಓದುವ, ಬರೆಯುವ ಹವ್ಯಾಸ ಬೆಳೆಸಿಕೊಂಡವಳು. ‘ನಗುವ ಹೂಗಳು’, ‘ಯುಗಾದಿಯ ಕುಸುಮಗಳು’, ಮತ್ತು ‘ರೆಕ್ಕೆ ಬಲಿತ ಹಕ್ಕಿ’ ಶಾಲಾದಿನಗಳಲ್ಲಿ ರಚಿಸಿ ಪ್ರಕಟಿಸಿದ ಪುಟ್ಟ ಕವನಸಂಕಲನಗಳು. ವಿದ್ಯಾಸಾಗರ ಬಾಲ ಪುರಸ್ಕಾರ, ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ ಮೊದಲಾದ ಪುರಸ್ಕಾರಗಳನ್ನು ಪಡೆದಿದ್ದಾಳೆ. ಇಂಜಿನಿಯರಿಂಗ್ ಓದಿ, ಮಾರ್ಕೆಟಿಂಗ್ನಲ್ಲಿ ಎಂಬಿಎ ಪದವಿ ಪಡೆದು ಪ್ರಸ್ತುತ ಬೆಂಗಳೂರಿನ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾಳೆ. ಓದುವುದು, ಚಾರಣ ಮಾಡುವುದು, ದೇಶಸುತ್ತುವುದು ಬಹಳ ಪ್ರಿಯವಾದ ವಿಚಾರಗಳು. ಅನುವಾದದ ದಿಸೆಯಲ್ಲಿ ಈ ಕೃತಿಯು ಈಕೆಯ ಮೊದಲ ಪ್ರಯತ್ನ.
shreekmarva@gmail.com
Reviews
There are no reviews yet.