Are Shatamaanada Mouna

80.00

ಯಾನ್ ರಫ್-ಓಹರ್ನ್ ಅವರು ಡಚ್ ಭಾಷೆಯಲ್ಲಿ ಬರೆದ ಈ ಮನಕಲಕುವ ಆತ್ಮಕತೆಯನ್ನು ಅರುಣ್ ಅವರು ಕನ್ನಡಕ್ಕೆ ತಂದಿದ್ದಾರೆ. ಈ ಕೃತಿಯ ಕುರಿತು ವಿಮರ್ಶಕ ಮತ್ತು ಸಾಂಸ್ಕೃತಿಕ ಚಿಂತಕ ರಹಮತ್ ತರೀಕೆರೆ ಅವರು ಈ ಅಭಿಪ್ರಾಯವನ್ನು ವ್ಯಕ್ತ ಪಡಿಸುತ್ತಾರೆ:

ಈಚೆಗೆ ನಾನು ಓದಿದ ಅಂತಃಕರಣ ಕಲಕುವ ಬರೆಹವಿದು. ಎರಡನೇ ಮಹಾಯುದ್ಧದಲ್ಲಿ ಜಪಾನಿ ಸೈನಿಕರ ಲೈಂಗಿಕದಾಸ್ಯಕ್ಕೆ ತಳ್ಳಲ್ಪಟ್ಟ ಡಚ್ ಮಹಿಳೆಯೊಬ್ಬಳು, ಲೋಕಕ್ಕಂಜಿ ತನ್ನೆದೆಯಲ್ಲಿ ಅಡಗಿಸಿಕೊಂಡಿದ್ದ ಅಪಮಾನ ನೋವು ಹಿಂಸೆಯ ಲಾವರಸದಂತಹ ದಾರುಣ ಅನುಭವವನ್ನು ಅರ್ಧಶತಮಾನದ ಬಳಿಕ ಬಿಚ್ಚಿಡುತ್ತಾಳೆ. ಯುದ್ಧದಲ್ಲಿ ಗೆದ್ದವರು ಲೂಟಿ ಮಾಡುವುದು ಮತ್ತು ಸೆರೆಸಿಕ್ಕ ಸ್ತ್ರೀಯರನ್ನು ಲೈಂಗಿಕವಾಗಿ ದುರ್ಬಳಕೆ ಮಾಡುವುದು ಜಗತ್ತಿನಾದ್ಯಂತ ಸೈನಿಕ ಸಂಸ್ಕೃತಿಯ ಭಾಗವಾಗಿದೆ. ಈ ದೌರ್ಜನ್ಯಕ್ಕೆ ನಮ್ಮವರು-ಅನ್ಯರು ಎಂತೇನಿಲ್ಲ. ಕೆಲವು ವರ್ಷಗಳ ಹಿಂದೆ, ಈಶಾನ್ಯ ಭಾರತದ ಮಹಿಳೆಯರು ಬೆತ್ತಲಾಗಿ ಸೈನಿಕ ಕಛೇರಿಗಳ ಮುಂದೆ ನಿಂತು ಮಾಡಿದ ಪ್ರತಿಭಟನೆ ಇದಕ್ಕೆ ಸಾಕ್ಷಿ. ಈ ಆತ್ಮಕತೆಯು ಯುದ್ಧಗಳ ಸೋಲು-ಗೆಲುವಿನ ಲೆಕ್ಕಾಚಾರಗಳಲ್ಲಿ ನಗಣ್ಯವಾಗುಳಿವ ಜನರ ನೋವನ್ನು ಹಿಡಿದಿಟ್ಟುಕೊಡುತ್ತ, ಯುದ್ಧಸಂಸ್ಕೃತಿಯ ಬಗ್ಗೆಯೇ ಹೇವರಿಕೆ ಹುಟ್ಟಿಸುತ್ತದೆ. ವೈರುಧ್ಯವೆಂದರೆ, ಮಾನವೀಯ ತುಡಿತ ಮತ್ತು ನಾಗರಿಕ ಹಕ್ಕುಪ್ರಜ್ಞೆಯಿಂದ ಹುಟ್ಟಿರುವ ಈ ಕಥನದಲ್ಲಿ, ಯೂರೋಪಿಯನರು ಏಶ್ಯಾ ದೇಶಗಳನ್ನು ಅವುಗಳ ಇಚ್ಛೆಗೆ ವಿರುದ್ಧವಾಗಿ ಆಕ್ರಮಿಸಿಕೊಂಡಿರುವುದು ತಪ್ಪೆಂಬ ನಿಲುವು ಇಲ್ಲದಿರುವುದು.

Check on Google Playstore

Category:

ABOUT THE AUTHOR

ಜಪಾನೀಯರು ೧೯೪೨ರಲ್ಲಿ ದಾಳಿ ಮಾಡಿ ಜಾವಾ ದ್ವೀಪವನ್ನು ವಶಪಡಿಸಿಕೊಂಡಾಗ ಇಂಡೊನೀಸಿಯಾದಲ್ಲಿನ ಡಚ್ ವಸಾಹತಿನಲ್ಲಿ ಅರಳಿದ್ದ ಯಾನ್ ರಫ್-ಓಹರ್ನಳ ಬಾಲ್ಯದ ಸರಳವಾದ ಸಹಜ ಸುಂದರ ಕನಸುಗಳು ಕಮರಿಹೋದವು. ಅವಳ ತಾಯಿ ಮತ್ತು ಇಬ್ಬರು ತಂಗಿಯರೊಡನೆ ಅವಳನ್ನೂ ಅಂಬರವಾ ಸೆರೆಮನೆ ಶಿಬಿರದಲ್ಲಿ ಬಂದಿಯಾಗಿಟ್ಟರು.ಫೆಬ್ರವರಿ ೧೯೪೪ರಲ್ಲಿ, ಆಗಷ್ಟೆ ಇಪ್ಪತ್ತೊಂದು ವರ್ಷ ತುಂಬಿದ್ದ ಸುಂದರ ತರುಣಿ, ಯಾನಳನ್ನು ಶಿಬಿರದಿಂದ ಬಲಾತ್ಕಾರವಾಗಿ ಕರೆದೊಯ್ದು ಜಪಾನ್ ಸೈನ್ಯಕ್ಕೆಂದೇ ಮೀಸಲಾಗಿದ್ದ ವೇಶ್ಯಾ ಗೃಹದಲ್ಲಿ ಲೈಂಗಿಕ ಗುಲಾಮಗಿರಿಗೆ ತಳ್ಳಿದರು.

ತಾನು ಅನುಭವಿಸಿದ ಸಂಕಟ, ನೋವು ಅವಮಾನಗಳನ್ನು ಸಾರ್ವಜನಿಕರೆದುರು ಹೇಳುವ ಮುನ್ನ ಅವಳು ದಶಕಗಳು ಗತಿಸಿದರೂ ನೋವಿನ ತೀವ್ರತೆ ತಗ್ಗಿರದ ಅವಮಾನಕರವಾದ, ನಾಚಿಕೆಗೇಡಿನ ಆ ಎಲ್ಲ ಘಟನೆಗಳನ್ನೂ ಮಕ್ಕಳು, ಮೊಮ್ಮಕ್ಕಳೊಡನೆ ಹಂಚಿಕೊಳ್ಳಲೇಬೇಕಿತ್ತು. ಆದರೆ ಅವರೆದುರು ಕುಳಿತು ಹೇಳುವುದಾದರೂ ಹೇಗೆ? ಬರವಣಿಗೆಯ ಮೂಲಕ ಹಂಚಿಕೊಳ್ಳುವುದು ಸೂಕ್ತ ಎನ್ನಿಸಿತು.

ಹಾಗೆ ಹೊರಬಂದ ಅವಳ ಆತ್ಮಚರಿತ್ರೆ ೫೦ ಇಯರ್ಸ್ ಆಫ್ ಸೈಲೆನ್ಸ್ ಈಗಾಗಲೇ ಜಪಾನ್ ಮತ್ತು ಇಂಡನೇಸಿಯಾ ಭಾಷೆಗಳಿಗೆ ಅನುವಾದವಾಗಿದೆ. ಅದೇ ಶೀರ್ಷಿಕೆಯೊಡನೆ ಸಿದ್ಧವಾದ ಅವಳ ಬದುಕಿನ ಕುರಿತ ಸಾಕ್ಷ್ಯಚಿತ್ರಕ್ಕೆ ಇದುವರೆಗೆ ಅನೇಕ ಪ್ರಶಸ್ತಿಗಳೂ ದೊರೆತಿವೆ. ಯಾನಳ ಜೀವನವು ಅವಳ ಅಂತಃಸತ್ವ ಮತ್ತು ದೃಢವಾದ ನಂಬಿಕೆಗಳ ಯಶೋಗಾಥೆಯೂ ಹೌದು.

ಶಿವಮೊಗ್ಗ ಜಿಲ್ಲೆಯ ಸೊರಬದಲ್ಲಿ ಆರಂಭದ ವಿದ್ಯಾಭ್ಯಾಸದ ನಂತರ ಸಾಗರದಲ್ಲಿನ ಲಾಲ್ ಬಹದೂರ್ ವಿಜ್ಞಾನ, ಕಲಾ ಮತ್ತು ಸೊಲಬಣ್ಣ ಶೆಟ್ಟಿ ವಾಣಿಜ್ಯ ಕಾಲೇಜಿನಲ್ಲಿ ವಿಜ್ಞಾನ ಪದವಿ. ಕೆಲವು ಕಾಲ ರೈಲ್ವೇಯಲ್ಲಿ ಸಹಾಯಕ ಸ್ಟೇಷನ್ ಮಾಸ್ಟರ್ ಕೆಲಸ. ಮನಸ್ಸಿಗೆ ಒಗ್ಗದ ಆ ಕೆಲಸ ಬಿಟ್ಟು ಪತ್ರಿಕೋದ್ಯಮದತ್ತ ಹೊರಳಿದರು. ತೀರ್ಥಹಳ್ಳಿಯ ಛಲಗಾರ ಪತ್ರಿಕೆಯ ಮೂಲಕ ಪತ್ರಿಕೋದ್ಯಮಕ್ಕೆ ಪ್ರವೇಶ. ಇಂಡಿಯನ್ ಎಕ್ಸಪ್ರೆಸ್ ಪತ್ರಿಕೆಯಲ್ಲಿ ಶಿವಮೊಗ್ಗ ಜಿಲ್ಲಾ ವರದಿಗಾರನಾಗಿ ೧೯೮೦ರಲ್ಲಿ ಸೇರಿ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿ ಅದೇ ಪತ್ರಿಕೆಯ ಕರ್ನಾಟಕ ಸ್ಥಾನಿಕ ಸಂಪಾದಕನಾಗಿ ಕೆಲಸ ಮಾಡಿ ೨೦೧೨ರಲ್ಲಿ ನಿವೃತ್ತನಾಗಿ ಶಿವಮೊಗ್ಗದಲ್ಲಿ ನೆಲೆಸಿದ್ದಾರೆ. ಕರ್ನಾಟಕದ ವಿವಿಧ ಪತ್ರಿಕೆಗಳಲ್ಲಿ ಸಣ್ಣ ಕತೆಗಳು ಪ್ರಕಟವಾಗಿವೆ. ಅರೆ ಶತಮಾನದ ಮೌನ ಪ್ರಕಟವಾಗುತ್ತಿರುವ ಮೊದಲ ಅನುವಾದಿತ ಕೃತಿ.

arunbenaka@gmail.com

Are Shatamaanada Mouna

Reviews

There are no reviews yet.

Be the first to review “Are Shatamaanada Mouna”

Your email address will not be published. Required fields are marked *

Scroll to top