ABOUT THE AUTHOR
ಮೂಲತಃ ಹುಕ್ಕೇರಿ ತಾಲೂಕಿನ ಘೋಡಗೇರಿಯವರಾದ ಬಸವಣ್ಣೆಪ್ಪಾನವರು ಜನಿಸಿದ್ದು 1976ರಲ್ಲಿ. ಆಂಗ್ಲ ಭಾಷೆಯಲ್ಲಿ ಸ್ನಾತಕೋತ್ತರ ಪದವಿ ಗಳಿಸಿರುವ ಬಸವಣ್ಣೆಪ್ಪಾನವರ ಹವ್ಯಾಸ ಕನ್ನಡದಲ್ಲಿ ಕಥೆ, ಕಾದಂಬರಿ, ನಾಟಕ ಹಾಗೂ ಕವನ ರಚನೆ. ಇವರ ಬಹಳಷ್ಟು ಸಣ್ಣಕಥೆಗಳು ಹಲವಾರು ಕಥಾಸ್ಪರ್ಧೆಗಳಲ್ಲಿ ಬಹುಮಾನ ಗಳಿಸಿವೆ. `ಪ್ರತಿಮೆಗಳು’ ಕವನ ಸಂಕಲನ ಮತ್ತು `ಮಳೆ ತಂದ ಹುಡುಗ’, `ಸಂಗೀತಾ’ ಮಕ್ಕಳ ನಾಟಕಗಳು ಇವರ ಪ್ರಕಟಿತ ಕೃತಿಗಳು. ಇವರ ಸಣ್ಣಕಥೆ `ಕ್ರೌರ್ಯ’ 2006ನೇ ಸಾಲಿನ ಡಾ. ಪಾಟೀಲ ಪುಟ್ಟಪ್ಪ ಕಥಾ ಪುರಸ್ಕಾರ ಪಡೆದಿದೆ. ಪ್ರಸ್ತುತ ಬೆಳಗಾವಿಯಲ್ಲಿ ನೆಲೆಸಿರುವ ಬಸವಣ್ಣೆಪ್ಪಾನವರು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಪಠ್ಯಪುಸ್ತಕ ಸಹ ಮೇಲ್ವಿಚಾರಕರಾಗಿದ್ದಾರೆ.
ganeshkambar.com@gmail.com
Reviews
There are no reviews yet.