Devara Rajaa

100.00

ಸೂಕ್ಷ್ಮ ಕತೆಗಾರಿಕೆಯಿಂದ ಮತ್ತು ತನ್ನ ಕಾದಂಬರಿಗಳಿಂದ ಹೆಸರುವಾಸಿಯಾಗಿರುವ ಗುರುಪ್ರಸಾದ ಕಾಗಿನೆಲೆ ಅವರ ಕಥಾಸಂಕಲನವಿದು. ಅಮೆರಿಕ ಮತ್ತು ಭಾರತವೆರಡೂ ಸಮಾನ ಅವಕಾಶಗಳನ್ನು ಪಡೆಯುವ ಈ ಕತೆಗಳಲ್ಲಿ, ಎರಡೂ ಜಗತ್ತುಗಳನ್ನು ಹೊಸ ಕಣ್ಣುಗಳಿಂದ ನೋಡುವುದು ಸಾಧ್ಯವಾಗಿದೆ. ತನ್ನ ವೈದ್ಯಕೀಯ ಜಗತ್ತಿನ ಅನುಭವಗಳನ್ನೂ ಲೇಖಕರು ವಿವರವಾಗಿ ಪರಿಚಯಿಸುವುದರಿಂದ, ಮೂರನೆಯ ಜಗತ್ತಿನ ಅನಾವರಣವನ್ನೂ ಈ ಕತೆಗಳು ಮಾಡಿಕೊಡುತ್ತವೆ.

Check on Google Playstore

Category:

ABOUT THE AUTHOR

ಗುರುಪ್ರಸಾದ ಕಾಗಿನೆಲೆ ಹುಟ್ಟಿದ್ದು ಶಿವಮೊಗ್ಗ. ಬೆಳೆದದ್ದು ಮೈಸೂರು ಮತ್ತು ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ. ಬಳ್ಳಾರಿಯ ಸರಕಾರಿ ವೈದ್ಯಕೀಯ ವಿದ್ಯಾಲಯದಲ್ಲಿ ಎಂ ಬಿ ಬಿ ಎಸ್ ಮತ್ತು ಎಂ ಡಿ ಪದವಿ ಸದ್ಯಕ್ಕೆ ಮಿನೆಸೊಟಾ ರಾಜ್ಯದ ರಾಚೆಸ್ಟರ್‍ನಲ್ಲಿ ಪತ್ನಿ ಪದ್ಮ ಮತ್ತು ಮಕ್ಕಳಾದ ಪ್ರಣಿತ ಮತ್ತು ಪ್ರಭವರೊಟ್ಟಿಗೆ ವಾಸ. ಓಮ್‍ಸ್ಟೆಡ್ ಆಸ್ಪತ್ರೆಯ ಎಮರ್ಜೆನ್ಸಿ ಮೆಡಿಸಿನ್ ವಿಭಾಗದಲ್ಲಿ ಎಮರ್ಜೆನ್ಸಿ ವೈದ್ಯನಾಗಿ ಕೆಲಸ. ‘ನಿರ್ಗುಣ’, ‘ಶಕುಂತಳಾ’, ‘ದೇವರರಜಾ’ – ಕಥಾಸಂಕಲನಗಳು, ‘ಬಿಳಿಯ ಚಾದರ’, ‘ಗುಣ’, ‘ಹಿಜಾಬ್’ – ಕಾದಂಬರಿಗಳು ಮತ್ತು ಕೆಲವು ಸಂಪಾದಿತ ಕೃತಿಗಳು ಪ್ರಕಟವಾಗಿವೆ. ‘ವೈದ್ಯ, ಮತ್ತೊಬ್ಬ’ ಕೃತಿಗೆ ಡಾ. ಪಿ.ಎಸ್. ಶಂಕರ್ ವೈದ್ಯ ಸಾಹಿತ್ಯ ಪ್ರಶಸ್ತಿ, ‘ಗುಣ’ ಕಾದಂಬರಿಗೆ ಸೂರ್ಯನಾರಾಯಣ ಚಡಗ ಪ್ರಶಸ್ತಿ, ‘ಹಿಜಾಬ್’ ಕಾದಂಬರಿಗೆ ಭಾರತೀಸುತ ಮತ್ತು ಡಾ. ಶಾಂತಾರಾಮ್ ಪ್ರಶಸ್ತಿ ಲಭಿಸಿವೆ.

gkaginele@gmail.com

Devara Rajaa
Scroll to top