ABOUT THE AUTHOR
ಜನನ: ೧೯೬೭, ಉತ್ತರ ಕನ್ನಡದ ಅಲಗೇರಿಯಲ್ಲಿ. ಹುಬ್ಬಳ್ಳಿಯ ಮಹಿಳಾ ಕಾಲೇಜಿನಲ್ಲಿ ಬಿ.ಕಾಂ ಮತ್ತು ಕರ್ನಾಟಕ ವಿ.ವಿ. ಧಾರವಾಡದಲ್ಲಿ ಕನ್ನಡ ಎಂ.ಎ. ಗೋಕರ್ಣ-ಹನೇಹಳ್ಳಿ ಮಧ್ಯೆ ಇರುವ ಕಡಮೆ ಊರಿನವರಾದ ಪ್ರಕಾಶ್ರೊಂದಿಗೆ ಗೃಹಿಣಿಯಾಗಿ ಸಧ್ಯ ಹುಬ್ಬಳ್ಳಿಯಲ್ಲಿ ವಾಸ. ಮಕ್ಕಳು: ಕಾವ್ಯ ಮತ್ತು ನವ್ಯ. ೧೯೯೭ ರಿಂದ ಬರವಣಿಗೆ ಆರಂಭ. ಪುಟ್ಟ ಪಾದದ ಗುರುತು (೨೦೦೫) ಗಾಂಧಿ ಚಿತ್ರದ ನೋಟು (೨೦೦೮) ಇವೆರಡು ಕಥಾ ಸಂಕಲನಗಳು. ಪಿಸುಗುಡುವ ಬೆಟ್ಟಸಾಲು (೨೦೦೬) ಪಡುವಣದ ಕಡಲು (೨೦೦೮) ಇವೆರಡು ನುಡಿಚಿತ್ರ ಸಂಕಲನಗಳು. ಸೀಳುದಾರಿ (೨೦೦೯) ಇದು ಕವನ ಸಂಕಲನ. ಛಂದ ಪುಸ್ತಕ ಬಹುಮಾನ, ಬೆಸಗರಹಳ್ಳಿ ರಾಮಣ್ಣ ಪುಸ್ತಕ ಬಹುಮಾನ. ಬಿಎಂಶ್ರೀ ಕಥಾ ಪುಸ್ತಕ ಬಹುಮಾನ, ಡಿ.ಎಸ್ ಕರ್ಕಿ ಕಾವ್ಯ ಬಹುಮಾನ, ರತ್ನಮ್ಮ ಹೆಗ್ಗಡೆ ಹಾಗೂ ಎಂ.ಕೆ ಇಂದಿರಾ ಬಹುಮಾನ ಸೇರಿದಂತೆ ಇನ್ನೂ ಅನೇಕ ಪುರಸ್ಕಾರಗಳು ಇವರ ಸಂಕಲನಗಳಿಗೆ ಸಂದಿವೆ. ಇವರ ಕೆಲವು ಕತೆಗಳು ಕೊಂಕಣಿ, ತಮಿಳು, ಮಲಯಾಳ ಹಾಗೂ ಇಂಗ್ಲಿಷ ಭಾಷೆಗಳಿಗೆ ಅನುವಾದಗೊಂಡಿವೆ. ಈ ಕೃತಿ ಇವರ ಮೊದಲ ಕಾದಂಬರಿ.
sunandakadame@gmail.com
Reviews
There are no reviews yet.