ABOUT THE AUTHOR
1982 ರಲ್ಲಿ ಕುಂದಾಪುರ ತಾಲೂಕಿನ ಬೀಜಾಡಿ ಗ್ರಾಮದಲ್ಲಿ ವಿಕ್ರಮ ಹತ್ವಾರ ಜನನ. ಕರಾವಳಿಯ ಯಕ್ಷಗಾನದ ಚಂಡೆಗಳ ಬಡಿತದಲ್ಲಿ, ಮಲೆನಾಡಿನ ತುಂಗೆಯ ಮಡಿಲಿನಲ್ಲಿ, ಶಿವಾಜಿನಗರದ ಗಲ್ಲಿಗಳಲ್ಲಿ ಅರಳಿದ ಬದುಕು ಬೆಂಗಳೂರು, ಕುಶಾಲನಗರ, ತಿರುವನಂತಪುರ, ಮುಂಬೈ, ನ್ಯೂಯಾರ್ಕ್ ನಗರಗಳಲ್ಲಿ ಸಂಚರಿಸಿದೆ. ವೃತ್ತಿಯಿಂದ ಸಾಫ್ಟ್ವೇರ್ಇಂಜಿನಿಯರ್ ಆಗಿರುವ ಇವರು, ಕಳೆದ ಹದಿನೈದು ವರ್ಷಗಳಿಂದ ಟಾಟಾ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
`ಇದೇ ಇರಬೇಕು ಕವಿತೆ’, `ಅಕ್ಷೀ ಎಂದಿತು ವೃಕ್ಷ!’ ಎಂಬ ಕವನ ಸಂಕಲನ, `ಝೀರೋ ಮತ್ತು ಒಂದು’ ಎನ್ನುವ ಕಥಾಸಂಕಲನಗಳು ಪ್ರಕಟಗೊಂಡಿವೆ. ಸಂಸ್ಕೃತಿ ಚಿಂತನೆ, ವಿಮರ್ಶೆ, ಪ್ರಬಂಧ, ಸಂಗೀತ, ಸಿನಿಮಾಗಳಲ್ಲಿ ಆಸಕ್ತಿ ಹೊಂದಿದ್ದಾರೆ.
`ಝೀರೋ ಮತ್ತು ಒಂದು’ ಕಥಾ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ 2016ನೇ ಸಾಲಿನ ಯುವ ಪುರಸ್ಕಾರ ದೊರೆತಿದೆ.
vhathwar@gmail.com
Reviews
There are no reviews yet.