ABOUT THE AUTHOR
1968ರಲ್ಲಿ ಜನಿಸಿದ ಸುಮಂಗಲಾ ಮೂಲತಃ ಸಾಗರದವರು. ರಸಾಯನ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದ ನಂತರ ಕೆಲವು ವರ್ಷಗಳ ಕಾಲ ಬಿಜಾಪುರದಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡಿದ್ದಾರೆ. ಈಗ ಬೆಂಗಳೂರಿನಲ್ಲಿ ವಾಸ ಮತ್ತು ಕೆಲಸ. ‘ಸೀತಾಳೆ ಹೂ ಮತ್ತು ಇತರ ಕಥೆಗಳು’, ‘ಜುಮರು ಮಳೆ’, ‘ಕಾಲಿಟ್ಟಲ್ಲಿ ಕಾಲುದಾರಿ’ ಮತ್ತು ‘ಹನ್ನೊಂದನೇ ಅಡ್ಡರಸ್ತೆ’ – ಇವರ ಪ್ರಕಟಿತ ಕಥಾ ಸಂಕಲನಗಳು. ‘ಪಂಡಿತ್ ರಾಜೀವ ತಾರಾನಾಥ: ಜೀವನರಾಗ’ ಇವರು ಸಂಪಾದಿಸಿದ ಜೀವನ-ಕಥನ. ನೊಬೆಲ್ ಪ್ರಶಸ್ತಿ ವಿಜೇತ ಕೃತಿ ‘ವಾಯ್ಸ್ ಫ್ರಮ್ ಚರ್ನೋಬಿಲ್: ದಿ ಓರಲ್ ಹಿಸ್ಟರಿ ಆಫ್ ಎ ನ್ಯೂಕ್ಲಿಯರ್ ಡಿಸಾಸ್ಟರ್’ ಅನ್ನು ‘ಚರ್ನೋಬಿಲ್ ಪ್ರಾರ್ಥನೆ’ ಎಂದು ಕನ್ನಡಕ್ಕೆ ಅನುವಾದಿಸಿದ್ದಾರೆ. ‘ಇನ್‍ಫೋಸಿಸ್ ಪ್ರತಿಷ್ಠಾನ ಪ್ರಶಸ್ತಿ’, ‘ಡಾ. ಬೆಸಗರಹಳ್ಳಿ ರಾಮಣ್ಣ ಪ್ರಶಸ್ತಿ’, ‘ಮಾಸ್ತಿ ಸಾಹಿತ್ಯ ಪುರಸ್ಕಾರ’ ಮತ್ತು ‘ಬೇಂದ್ರೆ ಸಾಹಿತ್ಯ ಪ್ರಶಸ್ತಿ’ ಇವರ ಪುಸ್ತಕಗಳಿಗೆ ದೊರಕಿವೆ. ವಿಜಯ ಕರ್ನಾಟಕ – ಅಂಕಿತ ಆಯೋಜಿಸಿದ ಸಣ್ಣಕಥಾ ಸ್ಪರ್ಧೆಯಲ್ಲಿ ನಿರಂತರವಾಗಿ ಮೂರು ವರ್ಷ ಇವರಿಗೆ ಬಹುಮಾನ ದೊರಕಿದೆ.
sumangalagm@gmail.com
Reviews
There are no reviews yet.