ABOUT THE AUTHOR
ಡಾ. ಕೆ ಎನ್ ಗಣೇಶಯ್ಯ ವೃತ್ತಿಯಿಂದ ಕೃಷಿ ವಿಜ್ಞಾನಿ. ಕೋಲಾರ ಜಿಲ್ಲೆಯವರು. ೩೦ ವರ್ಷಗಳಿಂದ ತಳಿ ಅಭಿವೃದ್ದಿಯಲ್ಲಿ ತೊಡಗಿದವರು. ಪ್ರಾಣಿ ಮತ್ತು ಸಸ್ಯಗಳ ವರ್ತನೆಗೆ ಮೂಲಭೂತವಾದ ಜೀವವಿಕಾಸದ ತತ್ವಗಳನ್ನು ಅನ್ವೇಷಿಸುವುದು ಇವರ ಮತ್ತೊಂದು ಸಂಶೋಧನಾಸಕ್ತಿ. ಭಾರತದ ಪ್ರಮುಖ ಜೀವವೈವಿಧ್ಯ ತಾಣಗಳಲ್ಲಿನ ಸಸ್ಯಗಳ ಮತ್ತು ದೇಶದ ಜೀವ ಸಂಪತ್ತಿನ ಬಗ್ಗೆ ಇವರು ತಯಾರಿಸಿರುವ ಮಾಹಿತಿ ಖಜಾನೆಯ ಸಿ.ಡಿ.ಗಳು ಮತ್ತು ಅಂತರ್ಜಾಲ ಒಂದು ಅಪೂರ್ವ ಹೆಜ್ಜೆ. ಇನ್ನೂರಕ್ಕೂ ಹೆಚ್ಚು ವೈಜ್ಞಾನಿಕ ಪ್ರಬಂಧಗಳು ಮತ್ತು ಆರು ವೈಜ್ಞಾನಿಕ ಪುಸ್ತಕಗಳ ಪ್ರಕಟಣೆ.
ಶಾಲಭಂಜಿಕೆ ಸಣ್ಣಕತೆಗಳ ಸಂಕಲನ ಇವರ ಮೊದಲ ಸೃಜನಶೀಲ ಬರವಣಿಗೆ. ವಿವಿಧ ಪತ್ರಿಕೆಗಳಲ್ಲಿ ಹಲವಾರು ಕತೆಗಳು ಪ್ರಕಟವಾಗಿವೆ. ಕನಕ ಮುಸುಕು, ಕರಿಸಿರಿಯಾನ, ಕಪಿಲಿಪಿಸಾರ, ಚಿತಾದಂತ, ಏಳು ರೊಟ್ಟಿಗಳು, ಮೂಕಧಾತು ಮತ್ತು ಶಿಲಾಕುಲವಲಸೆ ಇವು ಇವರ ಕಾದಂಬರಿಗಳು. ಶಾಲಭಂಜಿಕೆ, ಪದ್ಮಪಾಣಿ, ನೇಹಲ, ಸಿಗೀರಿಯಾ, ಕಲ್ದವಸಿ ಮತ್ತು ಮಿಹಿರಾಕುಲ ಇವು ಇವರ ಕಥಾಸಂಕಲನಗಳು. ಭಿನ್ನೋಟ ಎನ್ನುವುದು ಇವರ ಲೇಖನಗಳ ಸಂಕಲನ.
ಕರ್ನಾಟಕ ಸರ್ಕಾರದ ಪರಿಸರ ಪ್ರಶಸ್ತಿ ಮತ್ತು ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ಜೊತೆಗೆ ಹಲವಾರು ಪ್ರಶಸ್ತಿಗಳಿಗೆ ಭಾಜನರು.
knganeshaiah@gmail.com
Reviews
There are no reviews yet.