ABOUT THE AUTHOR
ಮನು ಎಸ್. ಪಿಳ್ಳೈ ಅವರು, The Ivory Throne: Chronicles of the House of Travancore (Harper Collins India, 2015), Rebel Sultans: The Deccan from Khilji to Shivaji (Juggernaut, 2018) ಮತ್ತು The Courtesan, The Mahatma, And The Italian Brahmin: Tales From Indian History (Context – Westland Publications, 2019) ಕೃತಿಗಳ ರಚನಕಾರರು.
ಸಂಸತ್ತಿನ ಸದಸ್ಯರಾದ ಡಾ|| ಶಶಿ ಥರೂರರ ಬಳಿ ಸಿಬ್ಬಂದಿಯ ಮುಖ್ಯಸ್ಥರಾಗಿ ಕೆಲಸ ಮಾಡಿದ್ದಾರೆ. ಬ್ರಿಟನ್ನಿನ ಹೌಸ್ ಆಫ್ ಲಾರ್ಡ್ಸ್ನಲ್ಲಿ ಹಾಗೂ BBCನಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಆರು ವರ್ಷ ಆಳವಾದ ಸಂಶೋಧನೆ ನಡೆಸಿ ರಚಿಸಿದ ಮನು ಅವರ ಮೊದಲನೇ ಪುಸ್ತಕ, ‘ದಿ ಐವರಿ ಥ್ರೋನ್’ಗೆ 2016ರಲ್ಲಿ ಟಾಟಾ ಪ್ರಶಸ್ತಿ ಪುರಸ್ಕಾರ, ಮತ್ತು 2017ರಲ್ಲಿ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರವೂ ದೊರೆತಿದೆ. ಸೆರೆನಾ ಚೋಪ್ರಾ ಅವರ ಭೂತಾನ್ ಎಕೋಸ್ ಎಂಬ ಕೃತಿಗೆ ಲೇಖನಗಳನ್ನು ಬರೆದಿದ್ದಾರೆ. ಮಿಂಟ್ ಲೌಂಜ್ನಲ್ಲಿ ಅಂಕಣವನ್ನು ಬರೆಯುವ ಮನು, ದಿ ಹಿಂದೂ, ಓಪೆನ್ ಮ್ಯಾಗಜಿನ್, ಟೈಮ್ಸ್ ಆಫ್ ಇಂಡಿಯಾ, ಹಿಂದೂಸ್ತಾನ್ ಟೈಮ್ಸ್ ಹಾಗೂ ಇನ್ನಿತರ ನಿಯತಕಾಲಿಕಗಳಿಗೆ ಲೇಖನಗಳನ್ನು ಬರೆದಿದ್ದಾರೆ.
ಮನು ಪುಣೆಯ ಫಗ್ರ್ಯುಸನ್ ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಪ್ರಸ್ತುತ ಲಂಡನ್ನಿನ ಕಿಂಗ್ಸ್ ಕಾಲೇಜಿನಲ್ಲಿ ಡಾಕ್ಟರೇಟ್ ಪದವಿಯ ಅಧ್ಯಯನ ಮಾಡುತ್ತಿದ್ದಾರೆ.
ಬೆಂಗಳೂರಿನ ನಿವಾಸಿ. ಐಟಿ ಉದ್ಯೋಗಿ. ಕನ್ನಡ ಹಾಗೂ ಇಂಗ್ಲಿಷ್ ಸ್ನಾತಕೋತ್ತರ ಪದವಿಗಳನ್ನು ಪಡೆದಿದ್ದಾರೆ. ಓದು-ಬರಹ ಆಸಕ್ತಿ. ‘ಪರ್ವತದಲ್ಲಿ ಪವಾಡ’ ಎಂಬ ಅನುವಾದಿತ ಪುಸ್ತಕ ಹಾಗೂ ‘ಲ್ಯಾಪ್ಟಾಪ್ ಪರದೆಯಾಚೆಗೆ’ ಎಂಬ ಅಂಕಣ ಬರಹಗಳ ಪುಸ್ತಕವು ಪ್ರಕಟವಾಗಿದೆ. ಹಲವು ನಿಯತಕಾಲಿಕಗಳಲ್ಲಿ ವಿವಿಧ ವಿಷಯಗಳ ಕುರಿತಾದ ಲೇಖನಗಳನ್ನು ಪ್ರಕಟಿಸಿದ್ದಾರೆ.
samyu59@gmail.com
Reviews
There are no reviews yet.